ಸಿನಿಮಾ ನೋಡಲು ಥಿಯೇಟರ್ ಗೆ ಜನ ಬರದಿದ್ದಕ್ಕೆ ಬೇಸತ್ತ ನಿರ್ದೇಶಕರು ಚಪ್ಪಲಿಯಲ್ಲಿ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಸಿಷ್ಟ ಸಿಂಹ ಹಾಗೂ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಬಾರ್ಬರಿಕ್ ಹೆಸರಿನ ತೆಲುಗು ಸಿನಿಮಾ ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದೆ. ಈ ಕ್ರೈಂ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಕ ಮೋಹನ್ ಶ್ರೀವತ್ಸ ನಿರ್ದೇಶಿಸಿ ರಿಲೀಸ್ ಮಾಡಿದ್ದರು. ಸಿನಿಮಾಗೆ ಭರ್ಜರಿ ಪ್ರಚಾರ ಮಾಡಿದ್ದರು. ಎಲ್ಲಾ ಥಿಯೇಟರ್ ಗಳು ಖಾಲಿ ಹೊಡೆಯುವುದ್ನು ನೋಡಿದ ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾಗಿದ್ದಾರೆ.
ಸಿನಿಮಾ ಚೆನ್ನಾಗಿದ್ರೂ ಜನ ಯಾಕೆ ಬರ್ತಿಲ್ಲ..? ಕಾರಣ ಇಲ್ಲದೇ ಸಿನಿಮಾ ನೋಡಲು ಜನ ಬರದಿದ್ದರೆ ಸಿನಿಮಾ ಹೇಗಿದೆ ಎಂದು ನನಗೆ ಹೇಗೆ ಅರ್ಥವಾಗುತ್ತದೆ. ಅದೇ ಬೇರೆ ಭಾಷೆಯ ಸಿನಿಮಾ ರಿಲೀಸ್ ಆದ್ರೆ ಮುಗಿಬಿದ್ದು ನೋಡುತ್ತೀರಿ ಎಂದು ಬೇಸರ ಹೊರಹಾಕಿದ್ದಾರೆ. ನನಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಸಹ ಅನಿಸುತ್ತಿದೆ. ನನ್ನ ಸಿನಿಮಾ ಜನರಿಗೆ ಇಷ್ಟ ಆಗದಿದ್ರೆ ಚಪ್ಪಲಿಯಲ್ಲಿ ಹೊಡೆದುಕೊಳ್ಳುತ್ತೇನೆ ಎಂದು ಹೇಳಿದ್ದೆ, ಈಗ ಹಾಗೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.