ರಾಂಚಿ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 1 ಕೋಟಿ ರೂ. ಬಹುಮಾನ ಘೋಷಿಸಲ್ಪಟ್ಟಿದ್ದ ಒಬ್ಬ ಮಾವೋವಾದಿ ಸೇರಿದಂತೆ ಮೂವರು ಮಾವೋವಾದಿಗಳು ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಇಂದು ನಡೆದಿದೆ.
ಗೊರ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಟಿತ್ರಿ ಅರಣ್ಯದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ನಿಷೇಧಿತ ಸಿಪಿಐ (ಮಾವೋವಾದಿ)ನ ಸಹದೇವ್ ಸೊರೆನ್ ತಂಡ ಮತ್ತು ಭದ್ರತಾ ಪಡೆ ನಡುವೆ ಎನ್ಕೌಂಟರ್ ಕಾರ್ಯಾಚರಣೆ ನಡೆದಿದೆ.
“ಶೋಧ ಕಾರ್ಯಾಚರಣೆಯ ಸಮಯದಲ್ಲಿ 1 ಕೋಟಿ ರೂ. ಬಹುಮಾನ ಹೊತ್ತಿದ್ದ ಸಹದೇವ್ ಸೊರೆನ್ ಮತ್ತು ಇತರ ಇಬ್ಬರು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರನ್ನು ಹತ್ಯೆ ಮಾಡಿ ಮೂರು ಎಕೆ-47 ರೈಫಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಹತ್ಯೆಯಾದವರಲ್ಲಿ ಸಹದೇವ್ ಸೊರೆನ್ (ಕೇಂದ್ರ ಸಮಿತಿ ಸದಸ್ಯರಿಗೆ 1 ಕೋಟಿ ರೂ. ಬಹುಮಾನ), ರಘುನಾಥ್ ಹೆಂಬ್ರಾಮ್ (ವಿಶೇಷ ಪ್ರದೇಶ ಸಮಿತಿ ಸದಸ್ಯರಿಗೆ 25 ಲಕ್ಷ ರೂ. ಬಹುಮಾನ), ಮತ್ತು ವೀರ್ಸೆನ್ ಗಂಜು (ವಲಯ ಸಮಿತಿ ಸದಸ್ಯರಿಗೆ 10 ಲಕ್ಷ ರೂ. ಬಹುಮಾನ) ಸೇರಿದ್ದಾರೆ. ಇಂದು ಮುಂಜಾನೆ ಹಜಾರಿಬಾಗ್ನ ಗೋರ್ಹಾರ್ ಪ್ರದೇಶದ ಪಂಟಿತ್ರಿ ಅರಣ್ಯದಲ್ಲಿ ಬೆಳಿಗ್ಗೆ 4.20ರ ಸುಮಾರಿಗೆ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಸಿಆರ್ಪಿಎಫ್ ತಿಳಿಸಿದೆ.