ಬಾಂಗ್ಲಾ ದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ಆಕ್ರಮಣಗಳು ನಡೆಯುತ್ತಿದ್ದು ವಿಶ್ವದಾದ್ಯಂತ ಭಯ ಹುಟ್ಟಿಸಿದೆ. ಹಿಂದೂಗಳ ಮೇಲೆ ಮಾತ್ರವಲ್ಲದೆ ಹಿಂದೂಗಳ ಧಾರ್ಮಿಕ ಮಂದಿರಗಳ ಮೇಲೆ ಕೂಡಾ ಆಕ್ರಮಣ ನಡೆದು ಧ್ವಂಸ ಮಾಡಲಾಗುತ್ತಿದೆ. ಈ ಬಗ್ಗೆ ಭಾರತದ ಭಾರತೀಯರು ಆಕ್ರೋಶವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಶಾಕಿಂಗ್ ವಿಚಾರವೆಂದರೆ ಈವರೆಗೆ 88 ದಾಳಿ ನಡೆದಿರುವುದಾಗಿ ಬಾಂಗ್ಲಾ ಒಪ್ಪಿಕೊಂಡಿದೆ.
ಮಧ್ಯಂತರ ಸರ್ಕಾರ ಒಪ್ಪಿಕೊಂಡ ಸತ್ಯ…!
ಶೇಖ್ ಹಸೀನಾ ನೇತೃತ್ವದ ಸರಕಾರ ಆಗಸ್ಟ್‌ನಲ್ಲಿ ಪತನಗೊಂಡ ಬಳಿಕ ಹಿಂದೂಗಳ ಸಹಿತ ಅಲ್ಪಸಂಖ್ಯಾತರ ಮೇಲೆ 88 ದಾಳಿಗಳು ನಡೆದಿವೆ ಎಂದು ಮಧ್ಯಂತರ ಸರಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಅಲ್ಲಿರುವ ಭಾರತೀಯರು ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತ ಕಡೆ ಭಾರತ ಸರ್ಕಾರ ಬಾಂಗ್ಲಾಕ್ಕೆ ಖಡಕ್ ಸಂದೇಶವೊಂದನ್ನು ರವಾನಿಸಿದೆ. ಅಲ್ಲಿ ನೆಲೆಸಿರುವ ಇತರ ಹಿಂದೂಗಳನ್ನು ಶೀಘ್ರವಾಗಿ ರಕ್ಷಿಸಿ ಎಂದು ಭಾರತೀಯರು ಕೇಂದ್ರ ಸರ್ಕಾರದ ಜೊತೆ ಮನವಿಯನ್ನು ಕೂಡಾ ಮಾಡಿಕೊಂಡಿದ್ದಾರೆ.
ಬಾಂಗ್ಲಾಕ್ಕೆ ತೆರಳಿ ಖಡಕ್ ಎಚ್ಚರಿಕೆ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ…!!
ಈ ಬಗ್ಗೆ ಮಾಹಿತಿ ನೀಡಿದ ಸರಕಾರದ ಹಿರಿಯ ಅಧಿಕಾರಿ ಈ ಸಂಬಂಧ 70 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಬಾಂಗ್ಲಾಕ್ಕೆ ತೆರಳಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಆ ಬಳಿಕ ದಾಳಿ ಬಗ್ಗೆ ಮೊಹಮ್ಮದ್ ಯೂನುಸ್ ಸರಕಾರ ನಡೆದ ಸತ್ಯ ಘಟನೆಯನ್ನು ಒಪ್ಪಿಕೊಂಡಿದೆ. ಇನ್ನು ಮುಂದಕ್ಕೆ ಬಾಂಗ್ಲಾ ಆಕ್ರಮಣ ದಾರಿಯನ್ನು ಕೊನೆಗೊಳಿಸುತ್ತಾ ಕಾದುನೋಡಬೇಕಿದೆ…