ಇತ್ತೀಚಿಗಂತೂ ಡಿವೋರ್ಸ್ ಪ್ರಕರಣಗಳು ತೀರಾ ಹೆಚ್ಚುತ್ತಿದೆ. ಇದೀಗ ಇಲ್ಲೊಂದು ವಿಚ್ಛೇದನ ಪ್ರಕರಣ ಸಖತ್ ಸುದ್ದಿಯಾಗುತ್ತಿದ್ದು, ವ್ಯಕ್ತಿಯೊಬ್ಬರು ಪತ್ನಿಗೆ ಜೀವನಾಂಶ ಪಾವತಿಸಲು 80 ಸಾವಿರ ರೂ. ಮೌಲ್ಯದ 1-2 ರೂಪಾಯಿ ನಾಣ್ಯಗಳ ಕಟ್ಟನ್ನು ಕೋರ್ಟ್ಗೆ ಹೊತ್ತು ತಂದಿದ್ದಾರೆ.
ನಿಮ್ಮ ಪತ್ನಿಗೆ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ಚಿಲ್ಲರೆ ಹಣದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ. ನ್ಯಾಯಾಲಯ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ನಾಣ್ಯದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ.
ಹೌದು ಆ ವ್ಯಕ್ತಿ 80 ಸಾವಿರ ರೂ. ಮೌಲ್ಯದ 1-2 ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್ಗೆ ಹೊತ್ತು ತಂದಿದ್ದು, ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ. ವರದಿ ಪ್ರಕಾರ ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್ಗೆ ತಂದಿದ್ದಾರೆ. ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 37 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಪತ್ನಿ ಕಳೆದ ವರ್ಷ ಕೊಯಮತ್ತೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಇದೀಗ ಕೋರ್ಟ್ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆ ವ್ಯಕ್ತಿಗೆ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮಾಜಿ ಪತ್ನಿಗೆ ಪರಿಹಾರ ಹಣ ನೀಡುವ ಸಲುವಾಗಿ ಆ ವ್ಯಕ್ತಿ ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ನಾಣ್ಯಗಳ 20 ಕಟ್ಟುಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. ನಾಣ್ಯಗಳ ರೂಪದಲ್ಲಿಯೇ ವಿಚ್ಛೇದಿತ ಪತ್ನಿಗೆ ಪರಿಹಾರ ಹಣ ನೀಡಿದ್ದು, ಈ ಹಣವನ್ನು ನಗದು ರೂಪದಲ್ಲಿಯೇ ನೀಡಬೇಕು ಎಂದು ಕೋರ್ಟ್ ಹೇಳಿದ್ದಕ್ಕೆ ಆ ವ್ಯಕ್ತಿ ಮರುದಿನ ಕರೆನ್ಸಿ ನೋಟು ರೂಪದಲ್ಲಿ ಹಣ ನೀಡಿದ್ದಾರೆ. ಮತ್ತು ಬಾಕಿ ಉಳಿದ 1.2 ಲಕ್ಷ ರೂ ಹಣವನ್ನು ಆದಷ್ಟು ಬೇಗ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.