ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಡಿವೋರ್ಸ್ ಪಾರ್ಟಿಗಳು ಮೊದಲಿನಿಂದಲೂ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ಭಾರತದಲ್ಲೂ ಡಿವೋರ್ಸ್ ಪಾರ್ಟಿಗಳು ಸದ್ದು ಮಾಡಲು ಶುರು ಆಗಿದೆ.
ಆದರೆ, ಹರಿಯಾಣದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಡಿವೋರ್ಸ್ ಪಾರ್ಟಿ ಮಾಡಿ ಸುದ್ದಿಯಲ್ಲಿದ್ದಾನೆ. ಹರಿಯಾಣದ ನಿವಾಸಿಯಾದ ಮಂಜೀತ್ ಎಂಬಾತ ತನ್ನ ವಿಚ್ಚೇದನವನ್ನು ಖುಷಿಯಾಗಿ ಆಚರಿಸಿಕೊಂಡಿದ್ದಾನೆ. ಪಾರ್ಟಿ ಆಯೋಜಿಸುವ ಮೂಲಕ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಡಿವೋರ್ಸ್ ಅನ್ನು ಜಾಲಿ ಮಾಡಿದ್ದಾನೆ.
ವಿಚಿತ್ರವೆಂದರೆ ತನ್ನ ಭಾವಿ ಪತ್ನಿಯನ್ನು ಹೋಲುವ ಬೊಂಬೆಯೊಂದನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಪಾರ್ಟಿ ಮಾಡಿದ್ದಾನೆ. ಅದನ್ನು ಮಧುಮಗಳಂತೆ ಸಿಂಗರಿಸಿ ಪಾರ್ಟಿಯಲ್ಲಿ ನಿಲ್ಲಿಸಿಕೊಂಡಿದ್ದಾನೆ.
ಇದರ ಹಿಂಬದಿಯಲ್ಲಿ ತಮ್ಮ ಮದುವೆ ದಿನಾಂಕ ಹಾಗೂ ಡಿವೋರ್ಸ್ ಪಡೆದ ದಿನಾಂಕವಿರುವ ಪೋಸ್ಟರ್ ಕೂಡ ಅಂಟಿಸಿಕೊಂಡಿದ್ದಾನೆ. ಆದರೆ, ತನ್ನ ಮಾಜಿ ಪತ್ನಿಯನ್ನು ಹೋಲುವ ಬೊಂಬೆ ಇಟ್ಟು ಸಂಭ್ರಮಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗಿವೆ.
2020ರಲ್ಲಿ ಮಂಜೀತ್ ಕೋಮಲ್ ಅವರನ್ನು ವಿವಾಹವಾಗಿದ್ದರು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ವರದಿಯಾಗಿದೆ. ಆದರೆ ಇತ್ತೀಚೆಗೆ ಅವರು ಡಿವೋರ್ಸ್ ಪಡೆದಿದ್ದರು. ಇದನ್ನು ಸಂಭ್ರಮಿಸಲು ಹೊಸ ಪಾರ್ಟಿ ಮೂಡ್‌ಗೆ ಮಂಜೀತ್ ಹೋಗಿದ್ದು ಒಳ್ಳೆಯ ವೇದಿಕೆಯನ್ನು ಸಿಂಗರಿಸಿಕೊಂಡಿದ್ದಾನೆ. ಸ್ನೇಹಿತರನ್ನು ಪಾರ್ಟಿಗೆ ಕರೆಸಿ, ಕೇಕ್ ಕತ್ತರಿಸಿಕೊಂಡಿದ್ದಾರೆ. ಇದನ್ನು ಸ್ವಾತಂತ್ರ್ಯದ ಸಂಭ್ರಮ ಎಂದೂ ಹೇಳಿಕೊಂಡಿದ್ದಾರೆ.