ಉತ್ತರ ಪ್ರದೇಶ : ಪ್ರತಿ ವರ್ಷವೂ ಸಾವಿರಾರು ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಸಫಲರಾಗುತ್ತಾರೆ. ಹೀಗೆ 2023 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 13 ನೇ ರ‍್ಯಾಂಕ್ ಗಳಿಸಿ ತನ್ನ ಕನಸನ್ನು ನನಸಾಗಿಸಿಕೊಂಡ ಮೇಧಾ ಆನಂದ್ ಅವರ ಸ್ಫೂರ್ತಿದಾಯಕ ಕಥೆ ಇದು.
ಮೇಧಾ ಆನಂದ್ ಉತ್ತರ ಪ್ರದೇಶದ ಮೀರತ್‌ನಲ್ಲಿ ಹುಟ್ಟಿ ಬೆಳೆದವರು. ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಗುರಿಯೊಂದಿಗೆ ಮೇಧಾ ಯುಪಿಎಸ್‌ಸಿ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಹೆತ್ತವರ ಏಕೈಕ ಮಗಳಾಗಿದ್ದ ಮೇಧಾ ಅವರು, ಕುಟುಂಬದ ಭರವಸೆ ಮತ್ತು ಕನಸುಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು.
ಮೇಧಾ 2017 ರಲ್ಲಿ ಕಾನ್ಪುರದ ಹೆಚ್‌ಬಿಟಿಯುನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. ಸಾರ್ವಜನಿಕ ಸೇವೆಯ ಮೇಲಿನ ಅವರ ಉತ್ಸಾಹವು ಅವರನ್ನು ಐಎಎಸ್ ವೃತ್ತಿಜೀವನವನ್ನು ಆಯ್ಕೆಮಾಡುವಲ್ಲಿ ಕಾರಣವಾಯಿತು. ಅವರು 2018 ರಲ್ಲಿ ಯುಪಿಎಸ್‌ಸಿಗೆ ಪರೀಕ್ಷೆಗೆ ಮೊದಲ ಬಾರಿಗೆ ಹಾಜರಾಗಿದ್ದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ.
ಆದರೆ ಮೇಧಾ ಅವರು 2019 ರಲ್ಲಿ ಎರಡನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 311 ಅಖಿಲ ಭಾರತ ರ‍್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗುತ್ತಾರೆ. ಆದರೆ ಇಷ್ಟಕ್ಕೇ ತಮ್ಮ ಪ್ರಯತ್ನವನ್ನ ಬಿಡದ ಅವರು 2023ರಲ್ಲಿ 3ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 13ನೇ ರ‍್ಯಾಂಕ್ ಗಳಿಸುತ್ತಾರೆ. ಈ ಮೂಲಕ ಅನೇಕ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.