ಬೆಂಗಳೂರು: ಸಿ.ಟಿ ರವಿ ವಿವಾದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿದ ಪ್ರತಿಕ್ರಿಯೆ ವಾವದಕ್ಕೆ ಕಾರಣವಾಗಿದೆ. ಸುವರ್ಣ ಸೌಧದ ಆವರಣದ ಒಳಗೆ ದಾಂಧಲೆ ನಡೆದು ರವಿ ಮೇಲೆ ಹಲ್ಲೆಗೆ ಯತ್ನ ಕುರಿತು ಮಾಧ್ಯಮ ಪ್ರತಿನಿಧಿಗಳು ಡಿ.ಕೆ ಶಿವಕುಮಾರ್‌ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ‘ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಉಳಿದಿದ್ದು ಪುಣ್ಯ. ಕೊಲೆಗೆ ಯತ್ನ ಸ್ವಾಭಾವಿಕ’ ಎಂದಿದ್ದಾರೆ.
ಡಿಕೆಶಿ ನೀಡಿದ ಈ ಹೇಳಿಕೆ ವಿರುದ್ಧ ಜಾತ್ಯಾತೀತ ಜನತಾದಳ ಕೆಂಡ ಕಾರಿದೆ. ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ? ರೌಡಿ ಗ್ಯಾಂಗ್ ಮುಖ್ಯಸ್ಥನೋ ಎಂದು ಪ್ರಶ್ನೆ ಮಾಡಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಜೆಡಿಎಸ್ ಮಾಡಿದ ಪೋಸ್ಟ್ ಹೀಗಿದೆ. “ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ ? ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪಮುಖ್ಯಮಂತ್ರಿ! ರೌಡಿ ಕೊತ್ವಾಲ್‌ನ ಶಿಷ್ಯ ಡಿ.ಕೆ ಶಿವಕುಮಾರ್ ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡಿರುವ ನೀನು ರಾಜಕಾರಣಿಯೋ ? ರೌಡಿಯೋ..?” ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ಆಕ್ರೋಶಗೊಂಡಿದೆ.