ಚಂಡೀಗಢ :ಬಡವರ ಭೂಮಿಯನ್ನು ವಕ್ಛ್ ಹೆಸರಿನಲ್ಲಿ ಕಿತ್ತುಕೊಳ್ಳಲಾಗುತ್ತಿತ್ತು, ಈ ಲೂಟಿ ಈಗ ಹೊಸ ಕಾನೂನಿನೊಂದಿಗೆ ನಿಲ್ಲುತ್ತದೆ, ತಿದ್ದುಪಡಿ ಮಾಡಿದ ವಕ್ಫ್ ಕಾನೂನಿನಡಿಯಲ್ಲಿ ವಕ್ಫ್ ಮಂಡಳಿಯು ಯಾವುದೇ ಆದಿವಾಸಿ ಭೂಮಿಯನ್ನು ಪಡೆಯಲು ಸಾಧ್ಯವಿಲ್ಲ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಹರಿಯಾಣದ ಹಿಸಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಕಾಂಗ್ರೆಸ್ ತನ್ನ ನಿಲುವುಗಳ ಮೂಲಕ ಮೂಲಭೂತವಾದಿಗಳನ್ನು ಓಲೈಸುತ್ತಿದೆ ಮತ್ತು ಅದು ಮತಬ್ಯಾಂಕ್ ರಾಜಕೀಯಕ್ಕಾಗಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡಿದೆ. ಕಾಂಗ್ರೆಸ್ ಮೂಲಭೂತವಾದಿಗಳನ್ನು ಮಾತ್ರ ಓಲೈಸಿದೆ. ಇದಕ್ಕೆ ದೊಡ್ಡ ಪುರಾವೆ ವಕ್ಫ್ ಕಾನೂನು. ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ಮೀಸಲಿಡಲಾಗಿತ್ತು. ಆದರೆ ಬಡ ಮುಸ್ಲಿಮರು ಎಂದಿಗೂ ಪ್ರಯೋಜನ ಪಡೆಯಲಿಲ್ಲ ಕೇವಲ ಭೂ ಮಾಫಿಯಾ ಇದರ ಲಾಭ ಗಳಿಸಿತು.
ಬಡ ಮುಸ್ಲಿಮರ ಹಕ್ಕುಗಳನ್ನು ಖಾತರಿಪಡಿಸುವುದು ನಿಜವಾದ ಸಾಮಾಜಿಕ ನ್ಯಾಯ ಎಂದು ಮೋದಿ ಹೇಳಿದರು