ಅಯೋಧ್ಯೆ: ಐತಿಹಾಸಿಕ ರಾಮಮಂದಿರದಲ್ಲಿ ನಡೆಯಲಿರುವ ಧರ್ಮಧ್ವಜ ಸ್ಥಾಪನೆಗಾಗಿ ಅಯೋಧ್ಯೆ ನಗರ ಸಡಗರ-ಸಂಭ್ರಮದಿಂದ ಕಂಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದ ಶಿಖರದಲ್ಲಿ ಧರ್ಮಧ್ವಜವನ್ನು ಹಾರಿಸಲಿದ್ದಾರೆ.
ಧ್ವಜಾರೋಹಣದ ಮುನ್ನಾ ದಿನವಾದ ಸೋಮವಾರ ಅಯೋಧ್ಯೆ ದೀಪಾಲಂಕಾರ, ಹೂವಿನ ಅಲಂಕಾರ ಮತ್ತು ವಿಶೇಷ ಲೇಸರ್ ಶೋಗಳಿಂದ ಪ್ರಕಾಶಮಾನಗೊಂಡಿತ್ತು. ಲೇಸರ್ ಲೈಟ್ ಪ್ರದರ್ಶನದ ಮೂಲಕ ಶ್ರೀರಾಮಚಂದ್ರನ ಜೀವನದ ಪ್ರಮುಖ ಘಟನೆಗಳನ್ನು ಕಲಾತ್ಮಕವಾಗಿ ಬಿಂಬಿಸಲಾಯಿತು.
ಇಡೀ ನಗರವನ್ನು ದುರ್ಗಮ ಕೋಟೆಯಾಗಿ ಪರಿವರ್ತಿಸಿ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ , ಮತ್ತು ಸೈಬರ್ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ. ಡ್ರೋನ್ ವಿರೋಧಿ ವ್ಯವಸ್ಥೆಗಳು, ಸ್ನೈಪರ್ ತಂಡಗಳು, ಹಾಗೂ ಸುಮಾರು 90 ತಾಂತ್ರಿಕ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಗಾಗಿ ಒಟ್ಟು 6,970 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಗರದ ಪ್ರತಿಯೊಂದು ಪ್ರಮುಖ ಸ್ಥಳದಲ್ಲೂ ಕಣ್ಗಾವಲು ಬಿಗಿಗೊಳಿಸಲಾಗಿದೆ.
































