2025ರ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ ಸೆಪ್ಟೆಂಬರ್ 7 ರಾತ್ರಿ ಇರಲಿದ್ದು, ಏನಿದು ಗ್ರಹಣ? ಗ್ರಹಣದ ಸಮಯ, ಯಾರಿಗೆ ಶುಭ ಹಾಗೂ ಅಶುಭ ಫಲ? ಈ ಸಮಯದಲ್ಲಿ ಏನು ಮಾಡಬೇಕು, ಮಾಡಬಾರದು ಎಲ್ಲಾ ವಿವರ ಇಲ್ಲಿದೆ.
ಸೆಪ್ಟಂಬರ್ 7 ರಾತ್ರಿ ಚಂದ್ರ ಗ್ರಹಣ 2025
ಈ ವರ್ಷದ ಎರಡನೇ ಪೂರ್ಣ ಚಂದ್ರ ಗ್ರಹಣ (Lunar Eclipse) ಇದಾಗಿದ್ದು, ಈ ಬಾರಿಯ ಚಂದ್ರ ಗ್ರಹಣವು ಭಾರತವೂ ಸೇರಿದಂತೆ ಜಗತ್ತಿನ 85% ಜನರಿಗೆ ಗೋಚರವಾಗಲಿದೆ,
ಈ ಪೂರ್ಣ ಚಂದ್ರಗ್ರಹಣವನ್ನು ಏಶಿಯಾ ದೇಶಗಳು, ಆಸ್ಟ್ರೇಲಿಯಾ, ಆಫ್ರಿಕಾ ಹಾಗೂ ಯೂರೋಪಿನ ಭಾಗಗಳಲ್ಲಿ ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.
ಇದು ಪೂರ್ಣ ಚಂದ್ರಗ್ರಹಣವಾಗಿದ್ದು, ಈ ಖಗ್ರಾಸ ಅಥವಾ ಪೂರ್ಣ ಚಂದ್ರ ಗ್ರಹಣವು ಸೆಪ್ಟೆಂಬರ್ 7 ರಂದು ರಾತ್ರಿ 9.58ಕ್ಕೆ ಆರಂಭವಾಗಿ ರಾತ್ರಿ 1.26 ಅಂದರೆ ಸೆಪ್ಟೆಂಬರ್ 8 ರಂದು ಕೊನೆಗೊಳ್ಳುತ್ತದೆ.
ಗ್ರಹಣದ ಸ್ಪರ್ಶ ಕಾಲ ರಾತ್ರಿ 9.57 ಗಂಟೆ, ಮಧ್ಯದ ಕಾಲ 11.40 ಹಾಗೂ ಮೋಕ್ಷದ ಕಾಲ 1.26 ಎನ್ನಲಾಗಿದ್ದು, ಇದು ಸುಮಾರು 3 ಗಂಟೆ 28 ನಿಮಿಷ 2 ಸೆಕೆಂಡ್ ಗಳ ಕಾಲ ಸುದೀರ್ಘವಾದ ದೊಡ್ಡ ಗ್ರಹಣ ಇದಾಗಿದೆ.
ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಪ್ರಭಾವ
ಭಾರತದಲ್ಲಿ ನಾವು ವೈಜ್ಞಾನಿಕ ಖಗೋಳಶಾಸ್ತ್ರದ ಜೊತೆಗೆ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಕಾರಣ ಈ ಚಂದ್ರಗ್ರಹಣದಿಂದ ನಮ್ಮ ಗ್ರಹದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ಕೂಡ ವಿಶ್ಲೇಷಿಸುತ್ತೇವೆ.
ಶಾಸ್ತ್ರದ ಪ್ರಕಾರ ಇದೊಂದು ದೈವಿಕ ಘಟನೆಗಳೆಂದು ಪರಿಗಣಿಸಲಾಗುತ್ತದೆ, ಚಂದ್ರನ ಮೇಲೆ ರಾಹು ಕೇತುಗಳ ಪ್ರಭಾವ ಬೀರಲಾಗುತ್ತದೆ ಇದರಿಂದ ಈ ಗ್ರಹಣವನ್ನು ರಾಹುಗ್ರಸ್ತ ಗ್ರಹಣ ಎನ್ನಲಾಗುತ್ತದೆ,
ಚಂದ್ರ ಗ್ರಹಣ 2025 ಯಾರಿಗೆ ಶುಭ ಹಾಗೂ ಅಶುಭ ಫಲ?
ಇನ್ನು ರಾಶಿ ಹಾಗೂ ನಕ್ಷತ್ರಗಳ ಆಧಾರದಲ್ಲಿ ಈ ಪೂರ್ಣ ಚಂದ್ರಗ್ರಹಣ ಯಾರಿಗೆ ಲಾಭ ಯಾರಿಗೆ ನಷ್ಟ ತಂದು ಕೊಡಲಿದೆ ಎನ್ನುವುದಾಗಿ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ತಿಳಿಸಲಾಗುತ್ತದೆ
ಈ ಗ್ರಹಣವು ಶತಭಿಷ ನಕ್ಷತ್ರ ಹಾಗೂ ಕುಂಭ ರಾಶಿಯಲ್ಲಿ ನಡೆಯಲಿದ್ದು ಈ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರಲಿದ್ದು, ಇನ್ನುಳಿದ ಎಲ್ಲಾ ರಾಶಿಗಳ ಮೇಲೂ ಈ ಗ್ರಹಣ ಪ್ರಭಾವ ಬೀರಲಿದೆ.
ಮುಖ್ಯವಾಗಿ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನು ರಾಶಿ, ಮೀನ ರಾಶಿಗೆ ಹೆಚ್ಚಿನ ಶುಭ ಫಲ ತಂದು ಕೊಡಲಿದೆ.
ಈಗಾಗಲೇ ಸಾಡೇಸಾತ್ ಶನಿಯ ಪ್ರಭಾವದಲ್ಲಿರುವ ಮೇಷ ರಾಶಿಗೆ ಈ ಗ್ರಹಣದಿಂದ ಉದ್ಯೋಗ, ವೃತ್ತಿ ಜೀವನ ಹಾಗೂ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ,
ಇನ್ನು ಶುಭಫಲ ತಂದುಕೊಡುವ ಎಲ್ಲಾ ರಾಶಿಯವರ ಆರ್ಥಿಕ ಸ್ಥಿತಿ ಹೆಚ್ಚುವುದರ ಜೊತೆಗೆ ಎಲ್ಲಾ ಕಾರ್ಯಗಳಲ್ಲೂ ಶುಭ ಫಲವನ್ನು ನಿರೀಕ್ಷಿಸಬಹುದಾಗಿದೆ.
ಇನ್ನು ಕನ್ಯಾ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿಯವರು ಈ ಗ್ರಹಣದ ನಂತರ ಸ್ವಲ್ಪ ಎಚ್ಚರಿಕೆಯಿಂದಿರಬೇಕಾಗಿರುತ್ತದೆ.
ಈ ಗ್ರಹಣವು ನಿಮ್ಮ ಕೆಲಸ, ಆರೋಗ್ಯ, ಹಾಗೂ ಎಲ್ಲಾ ವಿಚಾರಗಳಲ್ಲೂ ಪ್ರಭಾವ ಬೀರಲಿದ್ದು, ಸ್ವಲ್ಪ ಜಾಗರೂಕರಿರಿ, ವಿಶೇಷವಾಗಿ ಕುಂಭರಾಶಿಯಲ್ಲೇ ಈ ಗ್ರಹಣ ಸಂಭವಿಸುವುದರಿಂದ ಈ ರಾಶಿಯವರು ಹೆಚ್ಚು ಜಾಗರೂಕರಾಗಿರುವುದು ಉತ್ತಮ.
ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು, ಮಾಡಬಾರದು?
ಜ್ಯೋತಿಷ್ಯದ ಪ್ರಕಾರ ಗ್ರಹಣವು ರಾತ್ರಿ ಸಂಭವಿಸಲಿದ್ದರೂ ಮಧ್ಯಾಹ್ನ 12.30 ಯಿಂದಲೇ ಸೂತಕದ ಕಾಲ ಆರಂಭವಾಗುತ್ತದೆ ಎನ್ನುತ್ತಾರೆ,
ಗ್ರಹಣವು ಈ ಬಾರಿ ರಾತ್ರಿ 9.58ರಿಂದ ಸಂಭವಿಸುವುದರಿಂದ ಅದಷ್ಟು ಬೇಗ ಅಂದರೆ ಗ್ರಹಣದ ಆರಂಭದ 1 ಘಂಟೆ ಮೊದಲೇ ಊಟ ಮಾಡುವುದು ಉತ್ತಮ, ಹಾಗೂ ಉಳಿದ ಆಹಾರ ಪದಾರ್ಥಗಳಿಗೆ ಗರಿಕೆ ಅಥವಾ ದರ್ಬೆ ಹಾಕುವುದು ಶಾಸ್ತ್ರದ ಪ್ರಕಾರ ಉತ್ತಮ.
ಇನ್ನು ಗ್ರಹಣದ ಸಮಯದಲಿ ಮನಸಿನ ಶಾಂತಿಗಾಗಿ ಪ್ರಾರ್ಥನೆ, ಜಪ, ಧ್ಯಾನ ಮಾಡುವುದರಿಂದ ಉತ್ತಮವಾಗಿದೆ, ಸಾಮಾನ್ಯವಾಗಿ ಗ್ರಹಣದ ಸಂದರ್ಭದಲ್ಲಿ ಮಲಗಬಾರದು
ಹಾಗೂ ಗ್ರಹಣದ ಅಂತ್ಯಕಾಲದಲ್ಲಿ ಸ್ನಾನ ಮಾಡಿ ಶುದ್ಧರಾಗುವುದು ವಾಡಿಕೆ ಆದರೆ ಈ ಬಾರಿ ಮಧ್ಯರಾತ್ರಿ ನಡೆಯುವುದರಿಂದ ಬೆಳಿಗ್ಗೆ ಈ ಕೆಲಸ ಮಾಡುವುದು ಉತ್ತಮ.
ಒಟ್ಟಾರೆ ಈ ಬಾರಿಯ ಖಗ್ರಾಸ ಚಂದ್ರ ಗ್ರಹಣವು ವಿಶ್ವದಾದ್ಯಂತ ಗೋಚರವಾಗಲಿದ್ದು, ಚಂದ್ರನ ಬಣ್ಣ ಕೆಂಪಾಗಿಲಿದೆ, ಈ ಕೌತುಕವನ್ನು ವೀಕ್ಷಿಸಲು ಖಗೋಳ ಪ್ರೇಮಿಗಳಿದ್ದರೆ,
ಜ್ಯೋತಿಷ್ಯ ಶಾಸ್ತ್ರದ ನಂಬಿಕಸ್ಥರು ಈ ಸಮಯದಲ್ಲಿ ಅವರ ಆಚರಣೆ, ಹಾಗೂ ಮುಂದಿನ ಲಾಭ ನಷ್ಟದ ಕೌತುಕದಲ್ಲಿದ್ದಾರೆ.