ಚಿತ್ರದುರ್ಗ: ಜಿಲ್ಲೆಯಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ ಹಾಗೂ ಮಾವು ಬೆಳೆಗೆ 2025-26ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ಮಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳೀಯ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆದ್ರ್ರತೆ ಮಾಹಿತಿಗಳನ್ನು ಅಂಶಗಳ ಆಧಾರದಲ್ಲಿ ಬೆಳೆ ವಿಮಾ ನಷ್ಟ ತೀರ್ಮಾನಿಸಲಾಗುವುದು. ಈ ಬಾರಿ ಜಿಲ್ಲೆಗೆ ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯನ್ನು ವಿಮಾ ನೊಂದಣಿಗಾಗಿ ನಿಗದಿ ಪಡಿಸಲಾಗಿದೆ.
ಪ್ರತಿ ಹೆಕ್ಟೇರ್ ಆಧಾರದಲ್ಲಿ ಮಾವು ಬೆಳೆಗೆ ರೂ.80,000, ದಾಳಿಂಬೆಗೆ ರೂ.1,27,000 ಅಡಿಕೆಗೆ ರೂ.1,28,000 ಮಿಮಾ ಮೊತ್ತ ನಿಗದಿ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ರೈತರು ಶೇ.5 ಲೆಕ್ಕಾಚಾರದಲ್ಲಿ ಮಾವಿಗೆ ರೂ.4,000 ದಾಳಿಂಬೆಗೆ ರೂ.6,350 ಹಾಗೂ ಅಡಿಕೆಗೆ ರೂ.6,400 ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಬಹುದು.
ನೊಂದಣಿ ಮಾಡಲು ಉದ್ದೇಶಿದ ಬೆಳೆ ಹಿಂದಿನ ವರ್ಷಗಳ ಬೆಳೆ ಸಮೀಕ್ಷೆಯಲ್ಲಿ ಕಂಡುಬರದಿದ್ದರೆ ನೊಂದಣಿಗೆ ಅನುಮತಿ ಇರುವುದಿಲ್ಲ. ಪಹಣಿ, ಎಫ್.ಐ.ಡಿ ಸಂಖ್ಯೆ, ಆಧಾರ್ ಕಾರ್ಡು ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಗಳೊಂದಿಗೆ ಹತ್ತಿರ ಗ್ರಾಮ-1, ಬ್ಯಾಂಕ್, ಸಿ.ಎಸ್.ಸಿ ಕೇಂದ್ರಗಳಲ್ಲಿ ರೈತರು ನೊಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರ ತೋಟಗಾರಿಕೆ ಇಲಾಖೆ ಅಥವಾ ಬ್ಯಾಂಕ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.