ಬೆಂಗಳೂರು: ಬಿಸಿನೆಸ್ ಲಾಸ್ ಆಗಿದ್ದಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನ ವಿಧಾನಸೌಧ ಪೊಲೀಸ್ರು ಬಂಧಿಸಿದ್ದಾರೆ. ಜನವರಿ 9ರಂದು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ವ್ಯಕ್ತಿ ರಾಮೇಶ್ವರ ಕೆಫೆ ರೀತಿ ಹಲವು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡೋದಾಗಿ ಹೇಳಿದ್ದ. ಈಗ ಈತನನ್ನು ವ್ಯಕ್ತಿಯನ್ನ ಪತ್ತೆಮಾಡಲಾಗಿದೆ.
ಗಣರಾಜ್ಯೋತ್ಸವದಂದು ರಾಮೇಶ್ವರಂ ಕೆಫೆ ಬ್ಲಾಸ್ಟ್ ರೀತಿ ಬೆಂಗಳೂರು ನಗರದಾದ್ಯಂತ ಬ್ಲಾಸ್ಟ್ ಮಾಡಲು ಸಿದ್ದತೆ ನಡೆಯುತ್ತಿದೆದೆ. ನಾಡ ಬಾಂಬ್ ಬಳಸಿ ನಗರದಾದ್ಯಂತ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರೆಂದು ಮನ್ಸೂರ್ ಅನ್ನೋ ವ್ಯಕ್ತಿ ಕರೆ ಮಾಡಿದ್ದ. ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ವ್ಯಕ್ತಿ ತನ್ನ ಹೆಸರು ರಿಯಾಜ್ ಅಂತ ಹೇಳಿದ್ದ. ಆರು ಮಂದಿಯ ಹೆಸರು ಹಾಗೂ ಪೋನ್ ನಂಬರ್‌ಗಳನ್ನು ಕಂಟ್ರೋಲ್ ರೂಂಗೆ ನೀಡಿದ್ದ. ಈ ಆರು ಮಂದಿ ಗಣರಾಜ್ಯೋತ್ಸವದಂದು ನಾಡ ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದ. ಕೆ.ಆರ್. ಮಾರ್ಕೆಟ್‌ನ ಇಸ್ಮಾಯಿಲ್, ಬೊಮ್ಮನಹಳ್ಳಿ ಅಲ್ತಾಫ್, ಜೆಸಿನಗರದ ನಾಹೀದ್, ಹೆಚ್.ಬಿ.ಆರ್ ಲೇಔಟ್ ನ ಅಮ್ಜದ್, ನೀಲಸಂದ್ರದ ಹುಮಾಯೂನ್, ಹಾಗೂ ತಬ್ರೇಜ್ ಹೆಸರು ಹಾಗೂ ಮೊಬೈಲ್ ನಂಬರ್ ನೀಡಿದ್ದ. ಕರಾರುವಕ್ ಮಾಹಿತಿ ಇರಬಹುದೆಂದು ಫುಲ್ ಅಲರ್ಟ್ ಆಗಿದ್ದ ಬೆಂಗಳೂರು ಪೊಲೀಸರು ಅಸಲಿಗೆ ಆರೋಪಿಯನ್ನ ಪತ್ತೆ ಮಾಡಿದಾಗ ಹೊರಬಂದ ವಿಚಾರವೇ ಬೇರೆಯಾಗಿದೆ.
ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ವ್ಯಕ್ತಿ ಹೆಸರು ರಿಯಾಜ್ ಅಲ್ಲ ಆತನ ಹೆಸರು ಮನ್ಸೂರ್ ಆಗಿದೆ. ಬೆದರಿಕೆ ಕರೆ ಮಾಡಿದ್ದ ಮನ್ಸೂರ್ ಕೆ.ಅರ್. ಮಾರ್ಕೆಟ್ ಬಳಿ ಪ್ರಾವಿಜನ್ ಸ್ಟೋರ್ ನಡೆಸ್ತಿದ್ದ. ಆತನ ಪ್ರಾವಿಜನ್ ಸ್ಟೋರ್‌ಗೆ ವ್ಯಾಪಾರ ಕಡಿಮೆಯಾಗಿ ಶಾಪ್ ಕ್ಲೋಸ್ ಮಾಡಿದ್ದ ಮನ್ಸೂರ್ ಹೊಸದಾಗಿ ಸ್ಕ್ರಾಪ್ ಬಿಝಿನೆಸ್ ಮಾಡಲು ಪ್ಲಾನ್ ಮಾಡಿದ್ದ. ಆದರೆ ಸ್ಕ್ರಾಪ್ ಬಿಝಿನೆಸ್ ಕೂಡ ಕೈ ಕೊಟ್ಟಿತ್ತು. ಹೀಗಾಗಿ ಕೆ.ಆರ್.ಮಾರ್ಕೆಟ್ ನಲ್ಲಿ ಪ್ರಾವಿಜನ್ ಸ್ಟೋರ್ ನಡೆಸ್ತಿದ್ದ ಇಸ್ಮಾಯಿಲ್, ಸ್ಕ್ರಾಪ್ ಬಿಜಿನೆಸ್ ನಡೆಸ್ತಿರೋ ಅಲ್ತಾಫ್ ಸೇರಿ ಕೆಲವರ ಹೆಸರು ಮೊಬೈಲ್ ನಂಬರ್ ನೀಡಿ ಕರೆ ಮಾಡಿದ್ದಾನೆ. ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.