ನವದೆಹಲಿ : 2025 ರ ಕೇಂದ್ರ ಬಜೆಟ್ನಲ್ಲಿ ತೆರಿಗೆ ಕಡಿತವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಮಧ್ಯಮ ವರ್ಗವು ಯಾವಾಗಲೂ ಪ್ರಧಾನಿ ಮೋದಿಯವರ ಹೃದಯದಲ್ಲ್ಲಿದ್ದಾರೆ ಎಂದು ಹೇಳಿದ್ದಾರೆ.
ಅವರು ಬಜೆಟ್ ಕುರಿತು ಪ್ರತಿಕ್ರಯಿಸಿ, 12 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಅಮಿತ್ ಶಾ ಅವರು, ಮಧ್ಯಮ ವರ್ಗದ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುನ್ನಡೆದಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು ಎಂದು ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.