ರಾಯ್ಪುರ : ಛತ್ತೀಸಗಢ ರಾಜ್ಯದ 2025-26ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಚಿವ ಒ.ಪಿ ಚೌಧರಿ ಅವರು ಸೋಮವಾರ ಮಂಡಿಸಿದ್ದಾರೆ. 100 ಪುಟಗಳ 1.65 ಲಕ್ಷ ರೂ. ಕೋಟಿ ಬಜೆಟ್ ಅನ್ನು ಕೈಯಲ್ಲಿ ಬರೆದು ಮಂಡಿಸಿರುವುದು ವಿಶೇಷವಾಗಿದೆ.
ಇದೇ ಮೊದಲ ಬಾರಿಗೆ ಛತ್ತೀಸಗಢ ವಿಧಾನಸಭೆಯ ಇತಿಹಾಸದಲ್ಲಿ ಕಂಪ್ಯೂಟರ್ನಲ್ಲಿ ಟೈಪಿಸಿದ ಪ್ರತಿ ಬಳಸದೆ ಹಸ್ತ ಪ್ರತಿಯಲ್ಲಿ ಬಜೆಟ್ ಮಂಡಿಸಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಒ.ಪಿ ಚೌಧರಿ ಅವರು, ಛತ್ತೀಸಗಢಕ್ಕೆ ಐತಿಹಾಸಿಕ ಉಪಕ್ರಮ. ರಾಜ್ಯದ ಮೊದಲ ಕೈಬರಹದ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ 100 ಪುಟಗಳ ಬಜೆಟ್ ಸಂಪ್ರದಾಯವು ಸ್ವಂತಿಕೆಯ ಹೊಸ ಉದಾಹರಣೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.