ಚಿಕ್ಕಮಗಳೂರು : ಉರಗ ಸಂತತಿಯಲ್ಲೇ ಅತ್ಯಂತ ಅಪಾಯಕಾರಿ ಹಾಗೂ ಅಪರೂಪದ ರಕ್ತ ಕನ್ನಡಿ ಹಾವು ಕಳಸದ ಕಲ್ಮಕ್ಕಿ ಗ್ರಾಮದಲ್ಲಿ ಇಂದು ಪತ್ತೆಯಾಗಿದೆ.
ಈ ಹಾವು ದೇಹದ ಮೇಲೆ ಕಪ್ಪು, ಕೆಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ಹಾವನ್ನು, ಮಲೆನಾಡಲ್ಲಿ ರಕ್ತಕನ್ನಡಿ ಹಾವು, ಹಪ್ಪಟೆ, ಹವಳದ ಹಾವು ಎಂದು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ.
ಕಳಸದ ಉರಗತಜ್ಞ ರಿಜ್ವಾನ್ ಎಂಬವರ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಿದ್ದು, ಅವರು ಇದನ್ನು ರಕ್ಷಿಸಿದ್ದಾರೆ. ವಿಷ ದೇಹ ಸೇರಿದರೆ ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ಉರಗ ತಜ್ಞ ರಿಜ್ವಾನ್ ತಿಳಿಸಿದ್ದಾರೆ.
ಇನ್ನು ಈ ಹಾವು ಕಡಿದರೆ ಸಾಯೋದು ಕಡಿಮೆ. ಆದರೆ ದೇಹಕ್ಕೆ ನಾನಾ ಸಮಸ್ಯೆ ತಂದು ಒಡ್ಡುತ್ತದೆ. ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಈ ಹಾವುಗಳು ನಿಶಾಚಾರಿಯಾಗಿದ್ದು, ರಾತ್ರಿ ವೇಳೆ ಹೆಚ್ಚಾಗಿ ಚಟುವಟಿಕೆಯಿಂದ ಕೂಡಿರುತ್ತವೆ.