ಮಧ್ಯಪ್ರದೇಶ : UPSC 2020ರಲ್ಲಿ 2ನೇ ರ್‍ಯಾಂಕ್ ಪಡೆದ ಟಾಪರ್ ಜಾಗೃತಿ ಅವಸ್ಥಿ ಅವರ ತಾಯಿ ತಮ್ಮ ಮಗಳನ್ನು ಅಧಿಕಾರಿ ಮಾಡಲು ತಮ್ಮ ಕೆಲಸವನ್ನು ತೊರೆದಿದ್ದರು. ಅವರ ಕುಟುಂಬವು ಮನೆಯಲ್ಲಿ ಟಿವಿಯನ್ನು ಸಹ ಸಂಪೂರ್ಣವಾಗಿ ಆಫ್ ಮಾಡಿತ್ತು. ಜಾಗೃತಿ ಅಗ್ರಸ್ಥಾನ ಪಡೆಯುವ ಮೂಲಕ ಕುಟುಂಬದವರ ತ್ಯಾಗವನ್ನು ಸಾರ್ಥಕಗೊಳಿಸಿದರು. ಅವರ ಸ್ಪೂರ್ತಿದಾಯ ಕಥೆ ಇಲ್ಲಿದೆ.
UPSC 2020 ಟಾಪರ್ ಜಾಗೃತಿ ಅವಸ್ಥಿ ಮಧ್ಯಪ್ರದೇಶದ ನಿವಾಸಿ. ಜಾಗೃತಿ ಅವಸ್ಥಿ ಭೋಪಾಲ್ ನ ಮೌಲಾನಾ ಆಜಾದ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಆದರೆ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಲು ಕೆಲಸವನ್ನು ತೊರೆದರು. ಅವರ ತಂದೆ ಡಾ. ಎಸ್ ಸಿ ಅವಸ್ಥಿ ಅವರು ಪ್ರಾಧ್ಯಾಪಕರು ಮತ್ತು ತಾಯಿ ಮಧುಲತಾ ಶಾಲಾ ಶಿಕ್ಷಕಿ. ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂದು ತಾಯಿ ಕೆಲಸ ಬಿಟ್ಟಿದ್ದರು.
ಜಾಗೃತಿ ಅವಸ್ಥಿ ದೆಹಲಿಯಲ್ಲಿರುವ ಐಎಎಸ್ ಕೋಚಿಂಗ್ ನಿಂದ ತಯಾರಿ ಆರಂಭಿಸಿದರು. ತನ್ನ ಮೊದಲ ಪ್ರಯತ್ನದಲ್ಲಿ UPSC ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಆದರೆ ಎರಡನೆ ಪ್ರಯತ್ನದಲ್ಲಿ ಲಾಕ್ ಡೌನ್ ವೇಳೆ ಮನೆಯಲ್ಲೇ ಇದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಟಿವಿ ಕೂಡ ಹಾಕುತ್ತಿರಲಿಲ್ಲ.
ಜಾಗೃತಿ ಅವಸ್ಥಿ ಅವರು ಐಎಎಸ್ ಅಧಿಕಾರಿಯಾಗಲು ಪ್ರತಿದಿನ 12-14 ಗಂಟೆಗಳ ಕಾಲ ಅಧ್ಯಯನ ಮಾಡಿ ಯುಪಿಎಸ್‌ಸಿಯಲ್ಲಿ 2ನೇ ರ್‍ಯಾಂಕ್ ಪಡೆದ ಟಾಪರ್ ಆದರು.