ಹೈದರಾಬಾದ್ನ ಮಿಯಾಪುರ್ ನಗರದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟಿದ್ದಾರೆ.
ಐವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸದ್ಯಕ್ಕೆ ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ಮಂಡಲದ ಎರಡು ವರ್ಷದ ಮಗು, ರಂಜೋಲಿಯ ಲಕ್ಷ್ಮಯ್ಯ (60), ವೆಂಕಟಮ್ಮ (55), ಅನಿಲ್ (32), ಮತ್ತು ಕವಿತಾ (24) ಮೃತಪಟ್ಟವರು.
ಇದೇ ರೀತಿಯ ಸಾವಿನ ಪ್ರಕರಣ ಅಹ್ಮದಾಬಾದ್ ನ ಬಗೋದರಾದಲ್ಲಿ ನಡೆದಿತ್ತು. ವಿಫುಲ್ ಕಾಂಜಿ ವಾಘೇಲಾ (34) , ಸೋನಾಲ್ (26) ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.