ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಪ್ರಮುಖ ನಟಿ ಪ್ರಜ್ಞಾ ನಾಗ್ರಾ (Pragya Nagra) ಅವರ ಖಾಸಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ವೈರಲ್ ಆಗಿದೆ. ಈ ವಿಷಯದ ಬಗ್ಗೆ ಪ್ರಜ್ಞಾ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾದ ನಂತರ ಪ್ರಸಿದ್ಧ ವ್ಯಕ್ತಿಗಳ ಗೌಪ್ಯತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ಪ್ರಸಿದ್ಧ ವ್ಯಕ್ತಿಗಳ ಹಲವಾರು ಖಾಸಗಿ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಪ್ರಸಿದ್ಧ ವ್ಯಕ್ತಿಗಳು ಖ್ಯಾತಿಯಿಗಾಗಿ ತಮ್ಮದೇ ವಿಡಿಯೊಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದರೆ, ಇತರರು ಇದನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ.
ಈ ಸ್ಕ್ರೀನ್ ಶಾಟ್‌ಗಳಲ್ಲಿನ (photo screen shot’s) ಫೋಟೋಗಳನ್ನು ಬ್ಲರ್ ಮಾಡಲಾಗಿದ್ದು, ಅವು ಆ ನಟಿಯದ್ದೇ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಇದು ನಟಿಯ ಹೆಸರಿಗೆ ಕಪ್ಪು ಚುಕ್ಕೆ ಇಡಲು ಹಾಗೂ ಅವರ ಹೆಸರು ಹಾಳು ಮಾಡಲು ಯಾರೋ ಮಾಡಿರುವ ಸಂಚು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಕೆಲವರು ಇದು ಡೀಪ್ ಫೇಕ್ ಜಮಾನ. ಇದು ಕೂಡ ಡೀಪ್ ಫೇಕ್ (deep fake) ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಹಲವು ಚಿತ್ರಗಳಲ್ಲಿ ನಟಿ ಪ್ರಜ್ಞಾ ನಾಗ್ರಾ ಬ್ಯುಸಿಯಾಗಿದ್ದಾರೆ. ಪ್ರಜ್ಞಾ 2022ರಲ್ಲಿ ತಮಿಳು ಚಿತ್ರ ‘ವರಲೂರು ಮುಕ್ಕಿಯುಮ್’ ಮೂಲಕ ಪಾದಾರ್ಪಣೆ ಮಾಡಿದರು (Made his debut). 2023ರಲ್ಲಿ ಅವರು ಮಲಯಾಳಂ ಚಿತ್ರ ‘ನದಿಗಳಿಲ್ ಸುಂದರಿ ಯಮುನಾ’ದಲ್ಲಿ ನಟಿಸಿದ್ದರು.