ಬೆಂಗಳೂರು: ದೋಸೆ ಮಾಡುವುದಕ್ಕೂ ಈಗ ರೋಬೋಟ್ ಬಂದಿದೆ. ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿಪಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಥಿಂಡಿ ಎಂಬ ಹೆಸರಿನ ಈ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಿ, ಕೆಲಸವನ್ನು ಸುಲಭವಾಗಿಸಲಿದೆ. r/ Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಒಂದು ವೈಯಕ್ತಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ.
ಈ ಥಿಂಡಿ ಎಂಬ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಬಲ್ಲದು. ಇದು ಹಿಟ್ಟನ್ನು ಪ್ಯಾನ್ ಮೇಲೆ ಸುರಿದು ಹರಡುತ್ತದೆ. ನನ್ನ ಕುಟುಂಬದ ಸದಸ್ಯರು ಅಡುಗೆ ಮಾಡುವುದನ್ನು ನೋಡಿದ ಬಳಿಕ ನಾನು ಈ ಬಗ್ಗೆ ಯೋಚಿಸಿದೆ. ಆ ಸಮಯದಲ್ಲಿ ನನಗೆ ಈ ಐಡಿಯಾ ಬಂದಿತು ಎಂದು ಹೇಳಿಕೊಂಡಿದ್ದಾರೆ. ರೋಬೋಟ್ ಪ್ಯಾನ್ ಮೇಲೆ ದೋಸೆ ಹಿಟ್ಟನ್ನು ಸುರಿದು, ದುಂಡಗೆ ಹರಡುತ್ತದೆ ಹಾಗೂ ಸಂಪೂರ್ಣವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸುವುದನ್ನು ಕಾಣಬಹುದು.