ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದಲ್ಲಿ ಗುರುವಾರ ಮುಂಜಾನೆ 2: 30ರ ಸುಮಾರಿಗೆ ದುಷ್ಕರ್ಮಿ ಚಾಕು ಇರಿದಿದ್ದಾನೆ. ಘಟನೆಯ ನಂತರ, ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ‘ಸೈಫ್ ಅಲಿ ಖಾನ್’ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು.
23 ವರ್ಷದ ಇಬ್ರಾಹಿಂ ತನ್ನ ತಂದೆಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಆ ಬೆಳಗಿನ ಜಾವದಲ್ಲಿ ತಮ್ಮ ಕಾರ್ ಡ್ರೈವರ್‌ಗಳು ಇರದ ಕಾರಣ, ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಬೇಕಾಯ್ತು ಎಂದು ವರದಿಯಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ 10 ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.