ಬೆಂಗಳೂರು : ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಶಾಕ್ ನೀಡಿದೆ. ಈಗ ಬೆಂಗಳೂರು ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ಕೊಟ್ಟಿದೆ. ಇಂದಿನಿಂದ ಬಿಎಂಟಿಸಿ ದೈನಿಕ ಹಾಗೂ ಮಾಸಿಕ ಬಸ್ ಪಾಸ್ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ನೂತನ ಹೆಚ್ಚಳ ದರ ಇಂದಿನಿಂದ ಜಾರಿ. ಸಾರಿಗೆ ಸಂಸ್ಥೆಯು ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರ ಏರಿಕೆ. ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿಕ ದೃಷ್ಠಿಯಿಂದ ದೈನಿಕ, ಮಾಸಿಕ ಪಾಸ್‌ಗಳ ದರ ಹೆಚ್ಚಳ. ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ. ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300 ರಿಂದ ರೂ.350ಕ್ಕೆ ಹೆಚ್ಚಳ. ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸು ದರ ರೂ.945 ಇದ್ದದ್ದನ್ನು ರೂ.1080ಕ್ಕೆ ಹೆಚ್ಚಳ. ಸಾಮಾನ್ಯ ಮಾಸಿಕ ಪಾಸು ದರ ರೂ.1050ರಿಂದ ರೂ.1200ಕ್ಕೆ ಹೆಚ್ಚಳ. ಮೇಲ್ಕಂಡ ಎಲ್ಲಾ ಪಾಸುದಾರರು. ಟೋಲ್ ಮಾರ್ಗಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕಗಳನ್ನು ಪಾವತಿಸುವುದು ಕಡ್ಡಾಯ.
