ಚಿತ್ರದುರ್ಗ: ಇತಿಹಾಸ ಪ್ರಸಿದ್ಧವಾದ ಚಂದ್ರವಳ್ಳಿಯ ಕೆರೆಯ ಪರಿಸರದಲ್ಲಿ ಒಂದು ಅಪರೂಪದ ಸ್ತಿçà ಪ್ರತಿಮೆ ಪತ್ತೆಯಾಗಿದೆ. ಇದನ್ನು ಪತ್ತೆ ಮಾಡಿದವರು ನಿವೃತ್ತ ಎಂಜಿನಿಯರ್ ಆದ ಶ್ರೀ ಚಂದ್ರಶೇಖರಪ್ಪ ಗುಂಡೇರಿ.
ನಿತ್ಯ ವಾಯುವಿಹಾರಕ್ಕಾಗಿ ಚಂದ್ರವಳ್ಳಿ ಪ್ರದೇಶಕ್ಕೆ ಹೋದಾಗ ಒಡ್ಡಿನ ಬಳಿ ಮನುಷ್ಯ ಸಂಚಾರವಿಲ್ಲದ ಜಾಗದಲ್ಲಿ, ರೂಢಿಯಂತೆ ಇವರು ಅಲ್ಲಿ ಬಿದ್ದಿದ್ದ ಅನಪೇಕ್ಷಿತ ವಸ್ತುಗಳನ್ನು ತೆಗೆದು ಆ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದಾಗ ಇವರಿಗೆ ಆ ಪ್ರತಿಮೆ ದೊರಕಿದೆ. ಇದನ್ನು ನೋಡಿದ ಅವರು ಶಾಸನ ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪನವರ ಗಮನಕ್ಕೆ ತಂದಾಗ ಅದನ್ನು ಅವರು ಬಂದು ಪರಿಶೀಲಿಸಿ ಅದು ವಿಜಯನಗರ ಕಾಲದ ಒಂದು ಅಪರೂಪದ ಪ್ರತಿಮೆ ಎಂದು ಗುರುತಿಸಿ ಮುರುಘಾಶ್ರೀ ವಸ್ತು ಸಂಗ್ರಹಾಲಯದ ಅಧಿಕಾರಿಯಾದ ಶ್ರೀ ಶಂಕರ ಅಥಣಿಯವರಿಗೆ ಅದನ್ನು ಮುರುಘಾಶ್ರೀ ಸಂಗ್ರಹಾಲಯಕ್ಕೆ ಸೇರಿಸಲು ಒಪ್ಪಿಸಿದರು.
ಮೂಲತಃ ಈ ಪ್ರತಿಮೆ ಎಲ್ಲಿಯದು ಎಂದು ತಿಳಿಯದು. ನರ್ತಕಿಯ ಪ್ರತಿಮೆ ಎನ್ನಬಹುದಾದ ಇದು ಬಹಳ ಸುಂದರವಾಗಿದೆ. ಎಡಗೈ ಭಗ್ನವಾಗಿದ್ದು, ಆ ಭಗ್ನವಾದ ಕೈ ಅದರ ಜೊತೆಯಲ್ಲಿ ಲಭ್ಯವಾಗಿದ್ದು ಅದನ್ನು ಮುಂದೆ ಜೋಡಿಸಬಹುದು ಎಂದು ಶಂಕರ ಅಥಣಿಯವರು ತಿಳಿಸಿದ್ದಾರೆ. ಈ ಸ್ತುತ್ಯ ಕಾರ್ಯಕ್ಕಾಗಿ ಶ್ರೀಮಠ ಹಾಗು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ.ಪಿ.ಎಸ್. ಶಂಕರ್ ಹಾಗೂ ಎಸ್.ಎನ್. ಚಂದ್ರಶೇಖರ್ ಅವರುಗಳು ಈ ಕರ‍್ಯದಲ್ಲಿ ಭಾಗಿಯಾದ ಎಲ್ಲರನ್ನು ವಿಶೇಷವಾಗಿ ಶ್ರೀ ಚಂದ್ರಶೇಖರಪ್ಪ ಗುಂಡೇರಿ ಅವರನ್ನು ಅಭಿನಂದಿಸಿದ್ದಾರೆ.