ರಿಷಬ್ ಶೆಟ್ಟಿ ಅವರ ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊದಲನೇ ದಿನ ಕೋಟಿ ಕೋಟಿ ಲೂಟಿ ಮಾಡಿದ್ದ ಚಿತ್ರವು, ಎರಡನೇ ದಿನವೂ ಗಳಿಕೆಯಲ್ಲಿ ಕೊಳ್ಳೆ ಹೊಡೆದಿದೆ.
ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರ, ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಮೂಲಗಳ ಪ್ರಕಾರ, ಮೊದಲ ದಿನವೇ ಬರೋಬ್ಬರಿ 80 ಕೋಟಿ ಗಳಿಸಿರುವ ಮಾಹಿತಿ ಇದೆ. ಎರಡನೇ ದಿನವೂ ಗೆಲುವಿನ ನಾಗಲೋಟ ಮುಂದುವರೆದಿದ್ದು, ಕಲೆಕ್ಷನ್ ₹ 100 ಕೋಟಿ ದಾಟಿದೆ. ಎನ್ನಲಾಗಿದೆ.
ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿರುವ ಚಿತ್ರವು ವಿದೇಶದಲ್ಲೂ ಮ್ಯಾಜಿಕ್ ಮಾಡ್ತಿದೆ. ದಿನೇ ದಿನೇ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗ್ತಿದ್ದು, ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಸಿನಿಮಾ ಗೆದ್ದಿದೆ. ಉತ್ತರ ಭಾರತದಲ್ಲಿ ಕಾಂತಾರಗೆ ಭಾರೀ ಯಶಸ್ಸು ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ಮತ್ತಷ್ಟು ಕಲೆಕ್ಷನ್ ಜೋರಾಗುವ ನಿರೀಕ್ಷೆ ಇದೆ.
Sacnilk ಪ್ರಕಾರ, ಈ ಚಿತ್ರವು ಮೊದಲ ದಿನ ₹61.85 ಕೋಟಿ ಗಳಿಸಿದೆ ಎಂದಿದೆ. ಕನ್ನಡದಲ್ಲಿ 18.5 ಕೋಟಿ, ಹಿಂದಿಯಲ್ಲಿ 19.6 ಕೋಟಿ ಗಳಿಸಿದೆ ಅಂತಾ ವರದಿ ಮಾಡಿದೆ. ಇನ್ನು ಎರಡನೇ ದಿನ, ಬೆಳಗ್ಗೆ 10:30 ರ ಹೊತ್ತಿಗೆ 43.65 ಕೋಟಿ ಗಳಿಸಿದೆ ಎಂದು ಹೇಳಿದೆ.
ಗಳಿಕೆಯಲ್ಲಿ ‘ಕಾಂತಾರ ಅಧ್ಯಾಯ 1’ ಮೊದಲ ಭಾಗವನ್ನು ಮೀರಿಸುತ್ತದೆ. 2022 ರಲ್ಲಿ ಬಿಡುಗಡೆಯಾದ ಮೊದಲ ದಿನ 1.95 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಕಾಂತಾರ ಚಾಪ್ಟರ್-1, ಬರೋಬ್ಬರಿ 60 ಕೋಟಿಗೂ ಹೆಚ್ಚು ಹಣ ಗಳಿಸಿದೆ. Sacnilk ಪ್ರಕಾರ, ‘ಕಾಂತಾರ’ ಮೊದಲ ವಾರದಲ್ಲಿ 30.3 ಕೋಟಿ ರೂ. ಗಳಿಸಿತ್ತು. ಎರಡನೇ ವಾರದಲ್ಲಿ 42.3 ಕೋಟಿ ರೂ. ಗಳಿಸಿತ್ತು. ಎರಡು ವಾರಗಳಲ್ಲಿ ಒಟ್ಟು ಕಲೆಕ್ಷನ್ 72.6 ಕೋಟಿ ರೂಪಾಯಿ ಆಗಿತ್ತು.