ಉತ್ತರಪ್ರದೇಶ : ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕರೆ ಸಾಕು ಸಂಭ್ರಮವೇ ಬೇರೆ. ಹೀಗಿರುವಾಗ ಒಂದೇ ಕುಟುಂಬದ ನಾಲ್ವರು ಒಡಹುಟ್ಟಿದವರು ಅಧಿಕಾರಿಯಾದರೆ ಹೇಗೆ. ಹೌದು ಒಂದು ಕುಟುಂಬದ ನಾಲ್ವರು ಸಹೋದರ- ಸಹೋದರಿಯರು IAS-IPS ಅಧಿಕಾರಿಯಾದ ಕಥೆ ಇಲ್ಲಿದೆ.
ಉತ್ತರ ಪ್ರದೇಶದಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಉನ್ನತ ಅಧಿಕಾರಿಗಳಾಗಿದ್ದು, ತಂದೆ-ತಾಯಿಗೆ ಹೆಮ್ಮ ಪಡುವಂತ ಸಂಗತಿ. ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಮಿಶ್ರಾ ಕುಟುಂಬ. ಅನಿಲ್ ಮಿಶ್ರಾ ಅವರಿಗೆ ನಾಲ್ಕು ಮಕ್ಕಳು. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು. ಇವರ ಹೆಸರು ಯೋಗೇಶ್, ಮಾಧವಿ, ಚಾಮ ಮತ್ತು ಅನಿಲ್ ಮಿಶ್ರಾ.
ನಾಲ್ವರು ಮಕ್ಕಳೂ ಬೆಳೆದು ಅಧಿಕಾರಿಗಳಾಗಲಿ, ಹೆಸರು ಮಾಡಲಿ ಎಂಬುವುದು ಹೆತ್ತವರ ಆಸೆಯಾಗಿತ್ತು. ಅದಕ್ಕಾಗಿಯೇ ಅವರು ಮೊದಲಿನಿಂದಲೂ ಮಕ್ಕಳಿಗೆ ತುಂಬಾ ಕಷ್ಟಪಟ್ಟು ಕಲಿಸಿದರು. ಮಕ್ಕಳೂ ಅಧ್ಯಯನದಲ್ಲಿ ಬುದ್ಧಿವಂತರಾಗಿದ್ದರು.ಮೊದಲು ಹಿರಿಯ ಮಗ ಯೋಗೇಶ್ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು ಇದಾದ ನಂತರ ನಿಧಾನವಾಗಿ ಎಲ್ಲರೂ ಅಣ್ಣನ ಹಾದಿ ಹಿಡಿಯುವುದೇ ಸರಿ ಎಂದುಕೊಂಡು ತಯಾರಿ ಆರಂಭಿಸಿದರು.
ಯೋಗೇಶ್ ಮೊದಲು ಆಯ್ಕೆಯಾದರು. 2013ರಲ್ಲಿ ಐಎಎಸ್ ಆದರು. ನಂತರ ಉಳಿದ ಮೂವರು ಮತ್ತಷ್ಟು ಶ್ರಮವಹಿಸಿ ತಯಾರಿ ಆರಂಭಿಸಿದರು. 2014ರಲ್ಲಿ ಮಾಧವಿ ಆಯ್ಕೆಯಾದರು. ಅವರಿಗೆ ಅಖಿಲ ಭಾರತ 62ನೇ ರ್ಯಾಂಕ್ ಬಂದಿದೆ. ಯೋಗೇಶ್ ನಂತರ ಮಾಧವಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಮತ್ತೊಬ್ಬ ಸಹೋದರ ಲೋಕೇಶ್ 2015ರಲ್ಲಿ 44ನೇ ರ್ಯಾಂಕ್ ಪಡೆದು ಐಎಎಸ್ ಆದರು. ಲೋಕೇಶ್ ದೆಹಲಿಯ ಐಐಟಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯವರಾದ ಕ್ಷಮಾ ಮಿಶ್ರಾ ಅವರು 2015 ರಲ್ಲಿ ಯುಪಿಎಸ್ ಸಿಯನ್ನು ಪಾಸ್ ಮಾಡಿದರು. 172ನೇ ರ್ಯಾಂಕ್ ಪಡೆದು ಐಪಿಎಸ್ ಆಗಿದ್ದಾರೆ. ಮೂರು ವರ್ಷಗಳಲ್ಲಿ ಎಲ್ಲಾ ನಾಲ್ಕು ಸಹೋದರರು ಮತ್ತು ಸಹೋದರಿಯರು IAS-IPS ಆಗಿ ಎಲ್ಲರಿಗೂ ಮಾದರಿ ಕುಟುಂಬವಾಗಿದೆ