ಮಂಡ್ಯ : ಮದ್ಯದ ದಾಸನಾಗಿ ತೇಲಾಡುತ್ತಿದ್ದಾತ ಇದ್ದಕ್ಕಿದ್ದಂತೆ ಮದ್ಯ ಕುಡಿಯೋದೆ ಬಿಟ್ಟು ಬಿಟ್ಟ. ಹಾಗಂತ ಆತ ತನ್ನ ಪಾಡಿಗೆ ತಾನಿರ್ತಾನಾ ಇಲ್ಲ ಮದ್ಯ ಬಿಟ್ಟ ಖುಷಿಗೆ ಆತ ಮಾಡಿದ್ದೇನು ಗೊತ್ತಾ .. ಮುಂದೆ ಓದಿ…
ಆತನ ಹೆಸರು ಕಿರಣ್, ಇತ್ತೀಚೆಗೆ ಜೀವನದ ದಾರಿ ಬದಲಿಸಿದ್ದು, ಬಸರಾಳು ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಹಲವು ವರ್ಷಗಳ ಕಾಲ ಪ್ರತಿದಿನ ಮದ್ಯಪಾನ ಮಾಡುವ ಈ ಯುವಕ, ಕೆಲವು ದಿನಗಳ ಹಿಂದೆ ಜ್ಞಾನೋದಯವಾದ ಹಿನ್ನೆಲೆಯಲ್ಲಿ ಮದ್ಯವನ್ನು ತ್ಯಜಿಸಿದ್ದಾರೆ.
ಮದ್ಯದಲ್ಲಿ ವ್ಯಯಿಸುತ್ತಿದ್ದ ಹಣವನ್ನು ಇನ್ನು ಮುಂದೆ ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿ, ಕಿರಣ್ ಹೊಸ ದೃಷ್ಟಿಕೋಣದಿಂದ ಗ್ರಾಮಸ್ಥರ ಹೃದಯ ಗೆದ್ದಿದ್ದಾರೆ. ಈ ದಿನ, ಅವರು ಫಾರಂ ಕೋಳಿಗಳನ್ನು ಬಸರಾಳು ಗ್ರಾಮದ ಮನೆ ಮನೆಗೆ ಹಂಚಿ, ಸ್ನೇಹಿತರಿಗೆ ಹೊಸ ಬಟ್ಟೆಗಳನ್ನು ನೀಡಿದ್ದು, ಗ್ರಾಮದಲ್ಲಿ ಸಂತೋಷದ ವಾತಾವರಣ ಮೂಡಿಸಿದ್ದಾನೆ.
ಗ್ರಾಮಸ್ಥರು ಈ ಉತ್ಸಾಹಪೂರ್ಣ ಪರಿವರ್ತನೆ ಬಗ್ಗೆ ಮಾತನಾಡುತ್ತಾ, “ಎಷ್ಟೇ ಮದ್ಯಪಾನ ಮಾಡಿದರೂ ಈ ಯುವಕ ಇಂದು ಮದ್ಯವನ್ನು ತ್ಯಜಿಸಿ ಊರಿಗೆ ಉಪಕಾರ ಮಾಡುತ್ತಿದ್ದಾನೆ, ಇದು ಇತರ ಮದ್ಯ ಪ್ರಿಯರಿಗೆ ಮಾದರಿಯಾಗಲಿ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಿರಣ್ ಅವರ ಈ ಕಾರ್ಯವು ಸ್ವಂತ ಬದುಕಿನಲ್ಲಿ ಜವಾಬ್ದಾರಿತನಕ್ಕೆ ಒತ್ತಾಯಿಸುವ ಉತ್ತಮ ಉದಾಹರಣೆ ಎಂಬಂತೆ ಗ್ರಾಮದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.































