ನವದೆಹಲಿ : ವಕ್ಸ್ (ತಿದ್ದುಪಡಿ) ಕಾಯ್ದೆ 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 20 ರವರೆಗೆ ಮುಂದೂಡಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ವಕ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುತಿಸಿರುವ ಮೂರು ವಿಷಯಗಳ ಕುರಿತು ವಿವರವಾದ ಉತ್ತರವನ್ನು ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಕೇಂದ್ರ ವಕ್ಸ್ ಮಂಡಳಿ ಮತ್ತು ವಕ್ಸ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವುದು ಮತ್ತು ವಕ್ಸ್ ಆಸ್ತಿಗಳ ಡಿನೋಟಿಫಿಕೇಶನ್ ಸೇರಿದಂತೆ ವಕ್ಸ್ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ಸದ್ಯಕ್ಕೆ ಜಾರಿಗೆ ತರಲಾಗುವುದಿಲ್ಲ ಮತ್ತು ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ಕೇಂದ್ರವು ಭರವಸೆ ನೀಡಿತು.


































