ಚಿತ್ರದುರ್ಗ : ನಗರದ ದೊಡ್ಡಪೇಟೆಯ ಕೆಂಚನಾರಹಟ್ಟಿಯಲ್ಲಿರುವ ಕಾಟಲಿಂಗೇಶ್ವರಸ್ವಾಮಿ ದೇವರುಗಳ ಕಾಳು ಹಬ್ಬ(ಗುಗ್ಗರಿ ಹಬ್ಬ) ಜಾತ್ರೆ ಫೆ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವಾದ್ಯಗಳೊಂದಿಗೆ ದೇವಸ್ಥಾನದಿಂದ ದೇವರುಗಳನ್ನು ಹೊರಡಿಸಿ ಹೊಸ ದ್ಯಾಮವ್ವನಹಳ್ಳಿ ಬಳಿಯಿರುವ ಮೂಲ ಸ್ಥಾನದ ಪೌಳಿಯಲ್ಲಿ ಚಿಲುಮೆ ತೆಗೆದು ಗಂಗಾಜಲದಿಂದ ದೇವರುಗಳನ್ನು ಶುದ್ದಿಗೊಳಿಸಿ ಅಭಿಷೇಕ ಮಾಡಲಾಗುವುದು. 24 ರ ರಾತ್ರಿ 8 ಗಂಟೆಗೆ ಕಾಟಲಿಂಗೇಶ್ವರ ದೇವಸ್ಥಾನದಲ್ಲಿ ಕಂಬಳಿ ಗದ್ದಿಗೆ ಹಾಸಿ ಕಾಳು ಬೇಯಿಸಿ ರಾಶಿ ಹಾಕಿ ಚಿಗಳಿ ತಂಬಿಟ್ಟು ಬಾಳೆಹಣ್ಣು ತೆಂಗಿನಕಾಯಿ ಎಲೆ ಅಡಿಕೆ ಗದ್ದಿಗೆ ಮೇಲಿಟ್ಟು ಪೂಜೆ ನಂತರ ಮಹಾ ಮಂಗಳಾರತಿ ಪ್ರಸಾದ ವಿತರಣೆಯಿರುತ್ತದೆ.
25 ರಂದು ಬೆಳಿಗ್ಗೆ 9 ಕ್ಕೆ ಕಾಟಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಸ್ವಾಮಿಗೆ ದೊಡ್ಡೆ ಎಡೆ ನೈವೇದ್ಯ ಅರ್ಪಿಸಿ ಗುಡಿಕಟ್ಟಿನ ಅಣ್ಣ ತಮ್ಮಂದಿರುಗಳಿಗೆ ದೊಡ್ಡ ಎಡೆ ಪ್ರಸಾದವನ್ನು ನೀಡಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಡಿ.ಮೈಲಾರಪ್ಪ ವಿನಂತಿಸಿದ್ದಾರೆ.






























