ಪ್ರಯಾಣಿಸುವಾಗ ಬಾಟಲಿ ನೀರು ತೆಗೆದುಕೊಳ್ಳುವುದು ಸಾಮಾನ್ಯ. ಆರೋಗ್ಯದ ವಿಚಾರವಾಗಿ ಶುದ್ಧ ನೀರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇದೇ ಈಗ ಹಲವಾರು ನೀರಿನ ಬಾಟಲ್ ಬ್ರ್ಯಾಂಡ್ಗಳು ಮಾರುಟ್ಟೆಗೆ ಬರಲು ಕಾರಣವಾಗಿವೆ. ಅದರಲ್ಲೂ ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿಗಳು ಕೂಡ ಮಾರುಕಟ್ಟೆಗೆ ಬರುತ್ತಿವೆ. ಫಿಲ್ಲಿಕೊ ಜ್ಯವೆಲರಿ ವಾಟರ್ ಎಂಬ ಕುಡಿಯುವ ನೀರಿನ ಬಾಟಲಿ ಈಗ ಮಾರುಕಟ್ಟೆಯಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಇದರ ಒಂದು ಬಾಟಲಿ ಅಂದ್ರೆ ಒಂದು ಲೀಟರ್ ಬಾಟಲಿಯ ಬೆಲೆ 1 ಲಕ್ಷ 16 ಸಾವಿರ ರೂಪಾಯಿ. ಇದನ್ನು ಈಗ ವಿಶ್ವದ ಅತ್ಯಂತ ದುಬಾರಿ ಕುಡಿಯುವ ನೀರಿನ ಬಾಟಲ್ ಎಂದು ಗುರುತಿಸಲಾಗುತ್ತದೆ. ಇದು ಕೇವಲ ಪರಿಶುದ್ಧ ನೀರಿಗಾಗಿ ಮಾತ್ರ ಹೆಸರು ಮಾಡಿಲ್ಲ. ಅದರ ಲ್ಯಾವಿಶ್ ಪ್ಯಾಕಿಂಗ್ನಿಂದಲೂ ಕೂಡ ದೊಡ್ಡ ಹೆಸರು ಮಾಡಿದೆ. ಈ ಒಂದು ಬಾಟಲಿಯನ್ನು ಸ್ವರೊಸ್ಕಿ ಹರುಳುಗಳಿಂದ ಅಲಂಕರಿಸಲಾಗಿದೆ. ಅದ್ಭುತ ಆಭರಣಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೊಂದು ಬಾಟಲಿಯೂ ಕೂಡ ಐಷಾರಾಮಿ ಗುರುತಾಗಿ ಕಾಣಿಸಿಕೊಳ್ಳುತ್ತದೆ. ಫೆಲ್ಲಿಕೊ ಜುವೆಲ್ಲರಿ ವಾಟರ್ ಬಾಟಲ್ ಮೂಲತಃ ಜಪಾನ್ನ ಕೊಬೆ ಸಿಟಿಯಲ್ಲಿ ತಯಾರಾಗುತ್ತದೆ. ಇದು ಜಪಾನಿಗರ ಕರಕುಶಲತೆ ಹಾಗೂ ಹೊಸ ಆವಿಷ್ಕಾರಗಳಿಗೆ ಹೊಸ ಸಾಕ್ಷಿಯಾಗಿ ನಿಂತಿದೆ.
