ಬೆಂಗಳೂರು: ಕರ್ನಾಟಕ ಸರ್ಕಾರವು ಟ್ರಾಫಿಕ್ ದಂಡ ಪಾವತಿಗೆ ಶೇ. 50 ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಈಗಾಗಲೇ ಕೋಟಿಗಟ್ಟಲೆ ದಂಡ ಸಂಗ್ರವಾಗಿದೆ.
ಸಂಚಾರ ನಿಯಮ ಉಲ್ಲಂಘನೆಯಿಂದ ಉಂಟಾಗಿರುವ ಬಾಕಿ ದಂಡಗಳನ್ನು ಪಾವತಿಸಲು ಕರ್ನಾಟಕ ಸರ್ಕಾರ ನೀಡಿದ್ದ 50% ರಿಯಾಯಿತಿ ಯೋಜನೆಗೆ ವಾಹನ ಸವಾರರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ನಡೆದ ಈ ಆಫರ್ ಅವಧಿಯಲ್ಲಿ, ಒಟ್ಟು 22 ದಿನಗಳಲ್ಲಿ ಬರೋಬ್ಬರಿ 106 ಕೋಟಿ ರೂಪಾಯಿಗಳ ದಂಡ ಸಂಗ್ರಹವಾಗಿದೆ.
ಇದರೊಂದಿಗೆ, 37,86,173 ಬಾಕಿ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಸಂಪೂರ್ಣವಾಗಿ ಇತ್ಯರ್ಥಗೊಂಡಿವೆ ಈ ಯೋಜನೆಯ ಮೂಲಕ ವಾಹನ ಸವಾರರು ತಮ್ಮ ಬಾಕಿ ದಂಡಗಳನ್ನು 50% ರಿಯಾಯಿತಿಯೊಂದಿಗೆ ಪಾವತಿಸುವ ಅವಕಾಶ ಪಡೆದಿದ್ದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಪ್ರಕಾರ, ಈ ಅವಧಿಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ದಂಡ ಪಾವತಿ ಮಾಡಿದವರ ಸಂಖ್ಯೆ ಗಣನೀಯವಾಗಿದ್ದು, ಇದು ಸಂಚಾರ ನಿಯಮ ಪಾಲನೆಯನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗಿದೆ.