ಚಿತ್ರದುರ್ಗ ; ಚಿತ್ರದುರ್ಗದಲ್ಲಿ ಸೆ. 29 ರಂದು ಕೆಲವು ಪ್ರದೇಶಗಳಲ್ಲಿ ಹಳೆಯ ವೈರ್ ಬದಲಾವಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸೆ. 29 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೂ ಎಫ್-13 ಚಂದ್ರವಳ್ಳಿ ಮಾರ್ಗದಲ್ಲಿ ಬರುವ ಧವಳಗಿರಿ ಬಡಾವಣೆ, ಚೌಡೇಶ್ವರಿ ಲೇಔಟ್, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಕೆಎಸ್ಆರ್ಟಿಸಿ ಬಸ್ ಸ್ಟಾö್ಯಂಡ್, ಖಾಸಗಿ ಬಸ್ ನಿಲ್ದಾಣ, ಸಂತೆ ಹೊಂಡ, ಫಿಶ್ ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.