ಚಿತ್ರದುರ್ಗ: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಚಿತ್ರದುರ್ಗ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಇದೇ ಡಿ.17ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಚಿತ್ರದುರ್ಗ ನಗರ, ಕೆಳಕೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಳಘಟ್ಟ, ಜಿ.ಆರ್ ಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್ ಬಡಾವಣೆ, ಚಂದ್ರವಳ್ಳಿ, ಪಿ.ಕೆ.ಹಳ್ಳಿ, ಮಿಲ್ಲ್ ಏರಿಯಾ, ಕೆ.ಡ್ಲೂ.ಎಸ್.ಎಸ್.ಬಿ, ಯೂನಿವರ್ಸಿಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.