ಚಿತ್ರದುರ್ಗ: ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ವಿ.ವಿ ಕೇಂದ್ರದ ಆವರಣದಲ್ಲಿ ಬೃಹತ್ ಕಾಮಗಾರಿ ವಿಭಾಗ ಕೆ.ಪಿ.ಟಿ.ಸಿ.ಎಲ್ ನವರು 66 ಕೆ.ವಿ ಗೋಪುರ ನಿರ್ಮಾಣ ಹಮ್ಮಿಕೊಂಡಿರುವುದರಿಂದ ಡಿ.7ರಂದು ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿAದ ಸರಬರಾಜಾಗುವ 11ಕೆವಿ ಮಾರ್ಗಗದ ಅನ್ನೆಹಾಳ್, ಹುಲ್ಲೂರು ಎನ್.ಜೆ.ವೈ, ಪಂಡರಹಳ್ಳಿ ಕಾವಲಹಟ್ಟಿ, ಕುರುಬರಹಳ್ಳಿ, ಬೆಟ್ಟದನಾಗೇನಹಳ್ಳಿ, ಸಿಂಗಾಪುರ, ಕಕ್ಕೇರು, ಕಾವಲಹಟ್ಟಿ, ಮಹದೇವನಕಟ್ಟೆ, ಗೊಡಬನಾಳ್, ಸೊಂಡೆಕೊಳ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.