Pumpkin Seeds : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು

WhatsApp
Telegram
Facebook
Twitter
LinkedIn

ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ ಎಂದರೆ ಅದು ಕುಂಬಳಕಾಯಿ (Pumpkin). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ. ಕುಂಬಳಕಾಯಿ ಬಳಸಿ ಅಡುಗೆ ಮಾಡುವಾಗ ಬಹಳಷ್ಟು ‌ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ.

ರಂಜಕ,‌ ಮೆಗ್ನೀಸಿಯಮ್ ಮತ್ತು ಸತುವನ್ನು (phosphorus, Magnesium and zinc) ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ ಬೀಜಗಳು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯಕವಾಗಿವೆ.

ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ (Controls hungry and weight). ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.

ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುವುದು.

ಕುಂಬಳಕಾಯಿ ಬೀಜಗಳಲ್ಲಿನ ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.

ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.

ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ (Work against free radicals) ಮಾಡುತ್ತವೆ.

ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

*ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ (LDL), ಉರಿಯೂತವನ್ನು ಕಡಿಮೆ ಮಾಡುತ್ತವೆ.

ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಗುಣ (Anti- inflammatory properties) ಹೊಂದಿದೆ.

*ಕುಂಬಳಕಾಯಿ ಬೀಜವು ಕಬ್ಬಿಣ, ಸೆಲೆನಿಯಂ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidant) ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ.

ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದಿಂದಾಗುವ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).

ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ (Lower sugar levels) ಎನ್ನಲಾಗಿದೆ.

ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ಕಬ್ಬಿಣವು ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon