ಅತ್ಯುತ್ತಮ ಗಿಡಮೂಲಿಕೆ ಎನಿಸಿರುವ ಅಮೃತ ಬಳ್ಳಿ ಸ್ವಲ್ಪ ಕಹಿಯಾದರೂ ದೇಹಕ್ಕೆ ಸಿಹಿಯನ್ನುಂಟುಮಾಡುವ ಉತ್ತಮ ಔಷಧೀಯ ಸಸ್ಯ. ಅಮೃತ ಬಳ್ಳಿ ಎಲೆಯ ಅಡಿಭಾಗ ಮುಟ್ಟಿದರೆ ಮೃದುವಾದ ರೋಮ ಇರುತ್ತದೆ.
ಸ್ವರಸ, ಕಷಾಯ, ಬಳ್ಳಿ, ಸತ್ವ, ಭಸ್ಮ ರೂಪದಲ್ಲಿ ಔಷಧವಾಗಿ ಬಳಸುತ್ತಾರೆ. ಹಳೆಯ ಬೇವಿನ ಮರಕ್ಕೆ ಹಬ್ಬಿದ ಬಳ್ಳಿ ಹೆಚ್ಚು ಒಳ್ಳೆಯದು.
ಸ್ವರಸ ಕಷಾಯವಾದರೆ 4ರಿಂದ 5 ಚಮಚ. ಪುಡಿ ಆದರೆ ಮುಕ್ಕಾಲು ಅಥವಾ ಒಂದು ಚಮಚ. ಸತ್ವವನ್ನು ಎರಡರಿಂದ ಮೂರು ಚಿಟಿಕೆ ಸಾಕು.
1. ಇದನ್ನು ಜೇನುತುಪ್ಪ ಸೇರಿಸಿ ಎರಡು ಮೂರು ಹೊತ್ತು ತೆಗೆದುಕೊಂಡು ಸ್ವಲ್ಪ ವಿಶ್ರಾಂತಿ ಪಡೆದರೆ ಜ್ವರ ಗುಣವಾಗುತ್ತದೆ.
2. ಜೇನುತುಪ್ಪ, ಹಿಪ್ಪಲಿ,ತ್ರಿಫಲಾ ಸೇರಿಸಿ ಸೇವಿಸಿ ದರೆ ಕಣ್ಣಿನ ರೋಗಗಳು ಗುಣವಾಗುತ್ತದೆ.
3. ಇದರ ಜತೆಗೆ ತಣ್ಣನೆಯ ನೀರುಹಾಕಿ ಸ್ವಲ್ಪ ಜೇನುತುಪ್ಪ ಸೇರಿಸಿ ಸ್ವಲ್ಪ ಸ್ವಲ್ಪ ಸೇವಿಸಿದರೆ ವಾಂತಿ ನಿಲ್ಲುತ್ತದೆ.
4. ಇದರ ಜತೆಗೆ ಶುಂಠಿ ಪುಡಿಯನ್ನು ಸೇರಿಸಿ ಕಷಾಯ ಮಾಡಿ ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.
5. ಬಳ್ಳಿಯ ಚೂರುಗಳನ್ನು ನೀರಿನಲ್ಲಿ ಹಾಕಿ ಬೇಯಿಸಿ ಆ ನೀರು ಕುಡಿಯುವುದು ಮತ್ತು ಸ್ನಾನ ಮಾಡಿದರೆ ಚರ್ಮ ರೋಗ, ಪಿತ್ತ ಜ್ವರ, ತುರಿಕೆಮುಂತಾದ ರೋಗ ಕ್ಕೆ ತುಂಬಾ ಒಳ್ಳೆಯದು.(ನಮ್ಮಲ್ಲಿ ಅಮೃತ ಜಲ ಎನ್ನುತ್ತಾರೆ)
6. ಬಳ್ಳಿಯ ಹಸಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ನಂತರ ಸಪ್ಪೆ ಊಟವನ್ನು ಮಾಡಿದರೆ ಮೂಲ ವ್ಯಾಧಿ ಗುಣವಾಗುತ್ತದೆ.
7. ಹಸಿ ರಸವನ್ನು ಜೇನುತುಪ್ಪ ಸೇರಿಸಿ ಸೇವಿಸಿ ದರೆ ಕಾಮಾಲೆ ಗುಣವಾಗುತ್ತದೆ.
8. ಅಮೃತ ರಸಾಯನದಲ್ಲಿ ಇದರ ಸತ್ವ,ಉತ್ತರಣೆ, ವಾಯುವಿಳಂಗ, ವಿಷ್ಣುಕಾಂತಿ, ಅಳಲೆ, ಶುಂಠಿ, ಶತಾವರಿಯಿದ್ದು, ಇದು ಪದೇಪದೆ ಬರುವ ಜ್ವರ, ಗರ್ಭಿಣಿ ವಾಕರಿಕೆ, ನಿರ್ಭಲತೆ, ಕೆಲವು ವಾತರೋಗ ಗುಣಪಡಿಸಲು ಒಳ್ಳೆಯದು.
9. ಎರಡು ಎಲೆಗಳನ್ನು ದಿನವೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಶುಗರ್ ನಾರ್ಮಲ್ ಆಗುತ್ತದೆ. ಅಮೃತ ಸತ್ವ ತಯಾರಿಸುವ ವಿಧಾನ ಮಧ್ಯಮ ಗಾತ್ರದ ಬಳ್ಳಿಗಳನ್ನು ಸಂಗ್ರಹಿಸಿ ಸಣ್ಣಗೆ ಹೆಚ್ಚಿ ಸ್ವಲ್ಪ ಚಚ್ಚಿ ನೀರು ಹಾಕಿ ಸೋಸಿ ಚರಟ ಬಿಟ್ಟು ನೀರು ಶೇಖರಿಸಿ ಒಂದು ದಿನ ಅಲುಗಾಡಿಸದೇ ಇಡಿ. ನಂತರ ನಿದಾನವಾಗಿ ನೀರು ಬಗ್ಗಿಸಿ ತಳದಲ್ಲಿ ಬಿಳಿಯ ಹಿಟ್ಟು ಇರುತ್ತದೆ. ಇದನ್ನು ಬಿಸಿಲಿನಲ್ಲಿ ಬಟ್ಟೆಯನ್ನು ಮುಚ್ಚಿ ಒಣಗಿಸಿ ಚನ್ನಾಗಿ ಒಣಗಿದ ನಂತರ ಗಾಳಿ ಆಡದಂತೆ ಮುಚ್ಚಳವನ್ನು ಮುಚ್ಚಿ ಇಟ್ಟರೆ ಐದಾರು ವರ್ಷಗಳ ಕಾಲ ಹಾಳಾಗುವುದಿಲ್ಲ.