ಅಡುಗೆ ಮನೆಯಲ್ಲಿ ಒಂದು ಜಿರಳೆ ಇದ್ದರೆ ಅದು ತನ್ನ ಸಂತಾನವನ್ನು ವೃದ್ದಿ ಮಾಡಿ ಇಡೀ ಅಡುಗೆ ಮನೆಯಲ್ಲಿ ಮಾತ್ರವಲ್ಲದೆ, ಇಡೀ ಮನೆಯನ್ನು ಆವರಿಸಿಕೊಂಡು ಬಿಡುವುದು. ಹೀಗಾಗಿ ಒಂದು ಜಿರಳೆ ಕಂಡರೂ ಅದರ ಸಂತಾನವು ಅಲ್ಲೇ ಇದೆ ಎಂದು ಹೇಳಲಾಗುತ್ತದೆ.
ಜಿರಳೆಯಂತಹ ಕೀಟಗಳು ಏನೆಲ್ಲಾ ತಿನ್ನಬಹುದು, ಹೇಗೆ ಬದುಕಬಲ್ಲದು ಎಂಬ ಕುತೂಹಲವಿರುತ್ತದೆ ಅಲ್ಲವೇ?, ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿರುವ ಜಿರಳೆಗಳು ನಾವು ತಿನ್ನುವ ಆಹಾರದ ಹೊರತಾಗಿ, ಸತ್ತ ಸಸ್ಯ, ಪ್ರಾಣಿಗಳು, ಮಲ ವಸ್ತು, ಅಂಟು, ಸಾಬೂನು, ಕಾಗದ, ಚರ್ಮ ಮತ್ತು ಕೂದಲಿನ ಎಳೆಗಳನ್ನೂ ಸಹ ತಿನ್ನುತ್ತವೆ. ರಾತ್ರಿ ವೇಳೆ ಜಿರಳೆಗಳು ತೆವಳುವಾಗ ತೆರೆದಿಟ್ಟ ಆಹಾರ ಪದಾರ್ಥಗಳ ಮೇಲೆ ಮಲವಿಸರ್ಜನೆ ಮಾಡುವ ಮೂಲಕ ಕಲುಷಿತಗೊಳಿಸುತ್ತವೆ.
ಜಿರಳೆಗಳು ಒಳಚರಂಡಿ ಮತ್ತು ಕಸದ ತೊಟ್ಟಿಗಳಂತಹ ನೈರ್ಮಲ್ಯವಲ್ಲದ ಸ್ಥಳಗಳಿಂದ ಬ್ಯಾಕ್ಟೀರಿಯಾಗಳನ್ನು ಮನೆಗಳಿಗೆ ಹೊತ್ತು ತರುತ್ತದೆ. ನಮ್ಮ ಮನೆಗಳಲ್ಲಿನ ಆಹಾರ ಪದಾರ್ಥಗಳ ಮೇಲೆ ಓಡಾಡಿ ಆಹಾರವನ್ನ ಕಲುಷಿತಗೊಳಿಸುತ್ತವೆ. ಈ ಜಿರಳೆಗಳು ಕೆಲವೊಮ್ಮೆ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಸಹ ಹೊಂದಿದ್ದು, ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಜಿರಳೆಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಆರು ವಿಧದ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದು.
ಮೊದಲನೆಯದು ಸಾಲ್ಮೊನೆಲೋಸಿಸ್. ಇದರ ಲಕ್ಷಣಗಳು ಅತಿಸಾರ, ಹೊಟ್ಟೆ ನೋವು ಮತ್ತು ಜ್ವರ. ಇದು ಮಕ್ಕಳು, ವೃದ್ಧರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಎರಡನೆಯದು ಗ್ಯಾಸ್ಟ್ರೋಎಂಟರೈಟಿಸ್ ಬ್ಯಾಕ್ಟೀರಿಯಾ. ಇದು ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಮೂರನೆಯದು ಅಲರ್ಜಿ ಮತ್ತು ಆಸ್ತಮಾ. ಜಿರಳೆ ಚರ್ಮ, ಲಾಲಾರಸ ಮತ್ತು ಮಲದಲ್ಲಿರುವ ಅಲರ್ಜಿಗಳು ಗಾಳಿಯಲ್ಲಿ ಬಿಡುಗಡೆಯಾಗಬಹುದು.
ಮಕ್ಕಳಲ್ಲಿ ಆಸ್ತಮಾ ಬೆಳವಣಿಗೆಗೆ ಇದು ಪ್ರಮುಖ ಕಾರಣವಾಗಿದೆ. ಆಹಾರ ವಿಷ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಐದನೆಯದು ಸ್ಟ್ಯಾಫಿಲೋಕೊಕಸ್ ಸೋಂಕುಗಳು. ಇವು ಆಹಾರ ವಿಷ ಮತ್ತು ಚರ್ಮದ ಸೋಂಕುಗಳಿಗೂ ಕಾರಣವಾಗುತ್ತವೆ. ಈ ಎರಡು ಬ್ಯಾಕ್ಟೀರಿಯಾಗಳು ಆಹಾರ ಮತ್ತು ಪಾತ್ರೆಗಳನ್ನು ಕಲುಷಿತಗೊಳಿಸುತ್ತವೆ. ಆರನೆಯದು, ಜಿರಳೆಗಳು ಟೈಫಾಯಿಡ್ ಜ್ವರ ಮತ್ತು ಕಾಲರಾದಂತಹ ರೋಗಗಳನ್ನು ಹರಡಬಹುದು ಎಂದು WHO ಸೇರಿದಂತೆ ಅನೇಕ ಅಧ್ಯಯನಗಳು ಹೇಳುತ್ತವೆ.

































