ಬೆಂಗಳೂರು: ನಿವು ಬಿಪಿಎಲ್ ಕಾರ್ಡ್ ಪಡೆಯ ಬೇಕಾದರೆ ಈ ದಾಖಲಾತಿ ಕಡ್ಡಾಯ.! ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹1.2 ಲಕ್ಷಕ್ಕಿಂತ ಕಡಿಮೆ ಇರಬೇಕು. ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಇರಬಾರದು.
3 ಹೆಕ್ಟೇರ್‌ಗಿಂತ (7.5 ಎಕರೆ) ಹೆಚ್ಚು ಕೃಷಿ ಭೂಮಿ ಇರಬಾರದು. 4 ಚಕ್ರದ ವಾಹನ ಅಥವಾ ಆದಾಯ ತೆರಿಗೆ ಪಾವತಿಸಬಾರದು. ಮಾಸಿಕ ವಿದ್ಯುತ್ ಬಿಲ್ ₹450 ಕ್ಕಿಂತ ಹೆಚ್ಚು ಇರಬಾರದು. ಅರ್ಹರಿಗೆ ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಅಂತೆ.!