ದೆಹಲಿ: ಇತ್ತೀಚಿನ ವರ್ಷಗಳಲ್ಲಿ, ಹೃದಯಾಘಾತದಿಂದ ಬಳಲುತ್ತಿರುವ ಅಥವಾ ಸಾಯುವ ಯುವಕರ ಸಂಖ್ಯೆ ಹೆಚ್ಚಿದೆ.
ಇಂಡಿಯನ್ ಹಾರ್ಟ್ ಅಸೋಸಿಯೇಶನ್ ಪ್ರಕಟಿಸಿರುವ ಅಂಕಿ-ಅಂಶದಲ್ಲಿ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ದೇಶದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪುರುಷರ ಪೈಕಿ ಶೇ. 50 ರಷ್ಟು ಮಂದಿ 50 ವರ್ಷಗಳಿಗಿಂತ ಒಳಗಿನವರು ಹಾಗೂ ಶೇ. 25 ರಷ್ಟು ಮಂದಿ 40 ವರ್ಷಕ್ಕಿಂತ ಕೆಳಗಿನವರು. ಆದರೆ, ಮಹಿಳೆಯರ ಕುರಿತ ಈ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ ಎನ್ನಲಾಗಿದೆ.