ಚಿಕ್ಕಮಗಳೂರು: ಬಿ. ಯಶಸ್ವಿನಿ 2019ನೇ ಸಾಲಿನ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್)ಪರೀಕ್ಷೆಯಲ್ಲಿ ದೇಶಕ್ಕೆ 71ನೇ ಸ್ಥಾನ ಪಡೆದಿದ್ದಾರೆ. ಅವರು ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದವರು. ಸಕಸ್ಸ್
ತಾಲೂಕಿನ ಗುಬ್ಬಿಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರೋ ಬಿ.ಎಸ್.ಬಸವರಾಜಪ್ಪ ಅವರ ಪುತ್ರಿ ಯಶಸ್ವಿನಿ ಬಾಣೂರು ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ಕಡೂರಿನ ದೀಕ್ಷಾ ವಿದ್ಯಾ ಮಂದಿರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಶಿವಮೊಗ್ಗದಲ್ಲಿ ಪದವಿ ಪೂರ್ವ ಶಿಕ್ಷಣ ನಂತರ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ದೆಹಲಿಯ ವಾಜೀರಾಂ ಅಂಡ್ ರವಿ ಇನ್ಸ್ ಟಿಟ್ಯೂಟ್ನಲ್ಲಿ ತರಬೇತಿ ಪಡೆದ ಯಶಸ್ವಿನಿ ಪ್ರಸ್ತುತ ಐಡಿಇಎಸ್ (ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವೀಸ್) ನಲ್ಲಿ ಉದ್ಯೋಗ ತರಬೇತಿಯಲ್ಲಿದ್ದಾರೆ. ಕಳೆದ ಬಾರಿಯೂ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದ ಯಶಸ್ವಿನಿ 293ನೇ ಶ್ರೇಣಿ ಪಡೆದಿದ್ದರು.
ಯಶಸ್ವಿನಿ ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದು. ಐಎಎಸ್ ಅಧಿಕಾರಿ ಆಗಬೇಕೆನ್ನುವುದು ಅವರ ಬಯಕೆ-ಕನಸು. ಆ ನಿಟ್ಟಿನಲ್ಲಿ ಕಳೆದ ಬಾರಿ 293ನೇ ರ್ಯಾಂಕ್ ಪಡೆದರೂ ಅದು ಕಡಿಮೆ ಎನ್ನಿಸಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಎದುರಿಸಿ 71 ನೇ ರ್ಯಾಂಕ್ ಪಡೆದು ಯಶಸ್ಸಿಯಾದರು. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಏನನ್ನ ಬೇಕದ್ರು ಸಾಧಿಸುತ್ತಾರೆ ಅನ್ನೋದಕ್ಕೆ ಯಶಸ್ವಿನಿ ಸಾಕ್ಷಿಯಾಗಿದ್ದಾರೆ.