ಹೂವಿನ ಬಾಣದಂತೆ ಹಾಡನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ಈಕೆ ಸದ್ಯ ರಾಜ್ಯದಲ್ಲಿ ಭಾರೀ ವೈರಲ್ ಆಗಿದ್ದಳು. ಸ್ನೇಹಿತರ ಎದುರು ನಿಂತು ಆಕೆ ವಿಭಿನ್ನವಾಗಿ ಹಾಡಿದ್ದು, ಪಕ್ಕದಲ್ಲಿದ್ದವರು ನಗುತ್ತಿದ್ದರೂ ಕ್ಯಾರೇ ಮಾಡದೇ ಅವಳಷ್ಟಕ್ಕೇ ಹಾಡಿದ್ದಾಳೆ.
ಇನ್ನು ಈ ಹಾಡು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಭಾರೀ ವೈರಲ್ ಆಗಿದೆ. ಆದ್ರೆ ಇದೀಗ ಈ ವೈರಲ್ ಹುಡುಗಿಗೆ ಅಪಘಾತವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.
ಕಾರ್ಯಕ್ರಮ ಒಂದಕ್ಕೆ ಹಾಸನಕ್ಕೆ ಹೋಗಿ ಬರುವ ವೇಳೆ ಕೆ.ಆರ್ ಪೇಟೆ ಬಳಿ ಅಪಘಾತವಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.