ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆಯಲಿರುವ ಈ ಬಾರಿಯ ಹಿಂದೂ ಮಹಾಗಣಪತಿ ಹಬ್ಬ 18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್-27 ರಂದು ಗಣೇಶ ಪ್ರತಿಷ್ಠಾಪನೆಯಾಗಿ 18 ದಿವಸಗಳ ಕಾಲ ಗಣೇಶೋತ್ಸವ ನಡೆಯುತ್ತಿದ್ದು, ಸೆಪ್ಟಂಬರ್-13 ರಂದು ಶೋಭಾಯಾತ್ರೆ ನಡೆಯಲಿದ್ದು, ಈ ಬಾರಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿಯಾದ ಶರಣ್ ಕುಮಾರ್ ಆಯ್ಕೆ ಆಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಇಡೀ ಗಣೇಶೋತ್ಸವದ ಜವಾಬ್ದಾರಿ ಹೊತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ನ ಪ್ರಾಂತ್ಯ ಕಾರ್ಯದರ್ಶಿಯಾದ ಶರಣ ಪಂಪವಲ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1863 ರಲ್ಲಿ ಬಾಲಗಂಗಾಧರನಾಥ ತಿಲಕ್ ರವರು ಮೊದಲು ಗಣೇಶ ಉತ್ಸವವನ್ನು ಪ್ರಾರಂಭ ಮಾಡಿದರು.. ಅಂದಿನಿಂದ ಗಣೇಶ ಹಬ್ಬವನ್ನು ದೇಶದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಇಂದು ಇಡೀ ದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.. ಸಮಾಜದ ಎಲ್ಲಾ ವರ್ಗದವರನ್ನು ಒಂದುಗೂಡಿಸಿ ರಾಷ್ಟ್ರೀಯ ಭಾವನೆ ಮೂಡಿಸುವ ಕೆಲಸ ಆಗುತ್ತಿದೆ ಎಂದರು.
ಹಿಂದೂ ಮಹಾ ಗಣೇಶೋತ್ಸವನ್ನು ಚಿತ್ರದುರ್ಗದಲ್ಲಿ 2007ರಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಆರಂಭವಾಯಿತು.17 ವರ್ಷಗಳಿಂದ ಹಿಂದೂ ಮಹಾ ಗಣಪತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ಒಂದು ತಿಂಗಳು ನಡೆಯುವ ಈ ಉತ್ಸವ ಇಡೀ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಉತ್ಸವಕ್ಕೆ ಕೇವಲ ಚಿತ್ರದುರ್ಗದ ಜನತೆಗೆ ಅಷ್ಟೇ ಅಲ್ಲದೇ ದೇಶ ವಿದೇಶಗಳಿಂದ ಕಾರ್ಯಕರ್ತರು ಬಂದು ಭಾಗವಹಿಸುತ್ತಾರೆ.ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದಲೂ ಸಾವಿರಾರು ಜನ ಉತ್ಸವ ನೋಡಲು ಬರುತ್ತಾರೆ.ಕೊನೆಯಲ್ಲಿ ನಡೆಯುವ ಶೋಭಾಯಾತ್ರೆಯು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನ ಸೇರುವ ಶೋಭಾಯಾತ್ರೆ ಎಂಬ ಖ್ಯಾತಿ ಪಡೆದಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜೊತೆಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಸಮಿತಿ ಮಾಡಿಕೊಂಡು ಗಣೇಶೋತ್ಸವ ಮಾಡುತ್ತಾ ಬಂದಿದ್ದೇವೆ.ಚಿತ್ರದುರ್ಗ ನಡೆಯುವಂತಹ ಹಿಂದೂ ಮಹಾಗಣಪತಿ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ಗೆ ಹೆಚ್ಚು ಬಲ ತಂದಂತಹ ಕಾರ್ಯಕ್ರವಾಗಿದೆ.ನಾವು ದೇಶದ ವಿವಿದೆಡೆ ನಡೆಯುವ ಬೈಟೆಕ್ ಗಳಲ್ಲಿ ಚಿತ್ರದುರ್ಗ ಗಣೇಶ ಶೋಭಾಯಾತ್ರೆ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಯ್ಯ, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷರಾದ ಡಾ.ಮಂಜುನಾಥ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್ ಚಿತ್ರದುರ್ಗ ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು.