ಬೆಂಗಳೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಕಡ್ಡಾಯವಾಗಿ ನಡೆಯಲಿದೆ.
ಆದ್ರೆ ವೆಬ್‌ಕಾಸ್ಟಿಂಗ್ ಹಿನ್ನೆೆಲೆಯಲ್ಲಿ ಫಲಿತಾಂಶ ಕುಸಿತ ಎಂದು ನೀಡಲಾಗಿದ್ದ ಶೇ. 10 ಕೃಪಾಂಕ ಈ ಬಾರಿ ಇರುವುದಿಲ್ಲ ಸ್ಪಷ್ಟಪಡಿಸಿದ್ದಾರೆ. ಕಳೆದ ಬಾರಿ ಫಲಿತಾಂಶದಲ್ಲಿ ಭಾರಿ ಇಳಿಕೆ ದಾಖಲಾಗಿದ್ದ ಕಾರಣ ಶೇ. 10 ಕೃಪಾಂಕ ನೀಡಲಾಗಿತ್ತು.
ಆದರೆ ಕೋವಿಡ್ ಹಿನ್ನೆೆಲೆಯಲ್ಲಿ ಶೇ.10 ಕೃಪಾಂಕ ಸಹ ಜಾರಿಯಲ್ಲಿದ ಕಾರಣ ಒಟ್ಟು ಕ್ರಪಾಂಕದ ಪ್ರಮಾಣ ಶೇ. 20 ತಲುಪಿತ್ತು. ಕೃಪಾಂಕ ಪ್ರಮಾಣ ಹೆಚ್ಚಾದ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು.
ಹೀಗಾಗಿಯೇ ಈ ಬಾರಿ 10% ಕೃಪಾಂಕವನ್ನ ನೀಡದರಲಿ ನಿರ್ಧಾರಿಸಲಾಗಿದೆ.ಆದರೆ ಕೋವಿಡ್ ಕಾರಣಕ್ಕೆೆ ಜಾರಿಯಲ್ಲಿರುವ ಶೇ. 10 ಕೃಪಾಂಕದ ಬಗ್ಗೆೆ ಚರ್ಚೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷಿಗೆ ಹಾಜರಾಗುವ ಬಗ್ಗೆ ಗೃಹ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.