ಚಿತ್ರದುರ್ಗ: ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಹಳ್ಳಿಗಳು ನಿಧಾನವಾಗಿ ಆಧುನಿಕರಣದತ್ತ ಮುಖ ಮಾಡುತ್ತಿದ್ದಂತೆ ರೈತರು ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಆದರೂ ಇಲ್ಲಿ ಜೀವಂತ .ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದಲ್ಲಿ ತಾಲೂಕು ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಶಾಸಕರು ಎತ್ತಿನ ಗಾಡಿನ ಓಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನನ್ನ ಕ್ಷೇತ್ರವೇ ಒಂದು ರೀತಿಯ ಬುಡಕಟ್ಟು ಸಂಸ್ಕೃತಿಯ ತವರೂರು ಇದ್ದಂತೆ. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅಚ್ಚುಕಟ್ಟಾಗಿ ನಡೆಯುತ್ತಾ ಬಂದಿವೆ. ರೈತರಿಗೆ ಎತ್ತುಗಾಡಿ ದೇವರಿದ್ದಂತೆ. ಅವುಗಳು ಮನೆಯಲ್ಲಿ ಇದ್ದರೆ ಲಕ್ಷ್ಮಿ ಎಂಬ ನಂಬಿಕೆ ಸಹ ಇದೆ ಎಂದರು.
ಹುಣಸೇಕಟ್ಟೆ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಾಡಿದರು ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಮಾಡುತ್ತಾರೆ. ಅದೇ ರೀತಿಯಲ್ಲಿ ಇಂದು ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದ ಎತ್ತುಗಳು ಜೊತೆ ಯುಗಾದಿ ಸಂಭ್ರಮದ ದಿನ ಎತ್ತಿನಗಾಡಿ ಓಟದ ಸ್ವರ್ಧೆ ಏರ್ಪಡಿಸಿರುವುದು ರೈತರ ಜೊತೆಗೆ ನನಗೂ ಸಾಕಷ್ಟು ಖುಷಿ ತಂದಿದೆ.
ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿಯನ್ನು ಓಡಿಸುವುದು ಒಂದು ರೀತಿಯ ಸಾಹಸವೇ. ಇದಕ್ಕೆ ಪರಿಣತಿ ಬೇಕಾಗುತ್ತದೆ. ತಮ್ಮದೇ ಎತ್ತುಗಳ ಬಂಡಿಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತೆರಳಿ ಅಲ್ಲಿ ಓಡಿ ಗೆಲುವು ಪಡೆಯುವ ಮೂಲಕ ಹತ್ತೂರುಗಳಲ್ಲಿ ಹೆಸರು ಪಡೆಯುತ್ತಿದ್ದ ಕಾಲವಿತ್ತು. ಇವತ್ತಿಗೂ ಬಹಳಷ್ಟು ರೈತರು ಬರೀ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಎತ್ತಿನಗಾಡಿ ಓಡಿಸಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಎತ್ತುಗಳನ್ನು ಕಟ್ಟುವುದು ವಿರಳವಾಗಿದೆ. ಆದರು ಸಹ ಇಷ್ಟೊಂದು ಸುಮಾರು 30 ಜೊತೆ ಎತ್ತುಗಾಡಿಗಳು ಆಗಮಿಸಿದ್ದು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಎಲ್ಲಾರೂ ಹಬ್ಬದ ಸಂಭ್ರಮದಲ್ಲಿ ಮನೆಗೆ ತೆರಳಿ ಎಂದರು.