ನವದೆಹಲಿ: ಅಮೆರಿಕದ ವಿಮಾನ ತಯಾರಿಕ ಕಂಪನಿ ಬೋಯಿಂಗ್ 2020ರಲ್ಲಿ AH-64Eನ ಆರು ವಿಮಾನಗಳನ್ನು ಪೂರೈಸುವ ಒಪ್ಪದ ಮಾಡಿದ್ದು, ಇದೀಗ ಒಪ್ಪಂದದಂತೆ ಭಾರತೀಯ ಭೂಸೇನೆಗೆ ಮೂರು ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ರವಾನೆ ಮಾಡಿದೆ.
ಅಮೆರಿಕ-ಭಾರತ ಸಹಿ ಹಾಕಿದ ಒಪ್ಪಂದದಂತೆ ಮೊದಲ ಹಂತದಲ್ಲಿ AH-64E ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕ ರವಾನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರತೀಯ ಸೇನೆಯು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಕಾರ್ಯಚರಣೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಬರೆದುಕೊಂಡಿದೆ. ಈ ಅಪಾಚೆ ಹಲಿಕಾಪ್ಟರ್ ವಿಶ್ವದ ಅತ್ಯಂತ ಸುಧಾರಿತ ಮಲ್ಟಿ ರೋಲ್ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಇವುಗಳ್ನು ಅಮೆರಿಕ ಸೇನೆ ಬಳಸುತ್ತಿದೆ.