ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದಿಟ್ಟು ಮೂವರು ಸೋದರಿಯರು ಆತ್ಮಹತ್ಯೆ..!!

WhatsApp
Telegram
Facebook
Twitter
LinkedIn

ಇಂದು ಬುಧವಾರ ಮುಂಜಾನೆ ಗಾಜಿಯಾಬಾದ್‌ನಲ್ಲಿ ಒಂಬತ್ತನೇ ಮಹಡಿಯ ಫ್ಲಾಟ್‌ನ ಬಾಲ್ಕನಿಯಿಂದ ಹಾರಿ ಮೂವರು ಅಪ್ರಾಪ್ತ ಸಹೋದರಿಯರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಟೀಲಾ ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ್ ಸಿಟಿಯ ಟವರ್‌ನಲ್ಲಿರುವ ಒಂಬತ್ತನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಮೂವರು ಸೋದರಿಯರು ಹಾರಿರುವ ಬಗ್ಗೆ ನಸುಕಿನ ಜಾವ 2.15 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಶಾಲಿಮಾರ್ ಗಾರ್ಡನ್) ಅತುಲ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಚೇತನ್ ಕುಮಾರ್ ಎಂಬುವವರ ಪುತ್ರಿಯರಾದ ನಿಶಿಕಾ (16ವ), ಪ್ರಾಚಿ (14ವ) ಮತ್ತು ಪಖಿ (12ವ) ಎಂಬುವವರು ನೆಲ ಮಹಡಿಗೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಆಂಬ್ಯುಲೆನ್ಸ್ ಮೂಲಕ ಲೋನಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಪೊಲೀಸರು ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ, ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳದಿಂದ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ, ಅದರಲ್ಲಿ “ಮಮ್ಮಿ, ಅಪ್ಪಾ, ಕ್ಷಮಿಸಿ. ನಾವು ಚಟ ಬಿಡಬೇಕೆಂದು ನೀವು ಹೇಳುತ್ತಿದ್ದ ಆನ್ ಲೈನ್ ಗೇಮನ್ನು ನಾವು ಎಷ್ಟು ಪ್ರೀತಿಸುತ್ತಿದ್ದೆವು ಎಂದು ನಿಮಗೆ ಈಗ ಅರಿವಾಗುತ್ತದೆ ಎಂದು ಬರೆಯಲಾಗಿದೆ.

“ಈಸ್ ಡೈರಿ ಮೇ ಜೋ ಕುಚ್ ಭಿ ಲಿಖಾ ಹೈ ವೋ ಸಬ್ ಪಧ್ ಲೋ ಕುಕಿ ಯೇ ಸಬ್ ಸಚ್ ಹೈ. (ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ ಏಕೆಂದರೆ ಇದು ಸತ್ಯ)” ಎಂದು ಬರೆದಿದ್ದಾರೆ.

ಆನ್‌ಲೈನ್ ಕೊರಿಯನ್ ಗೇಮ್ಸ್ ವ್ಯಸನಕ್ಕೆ ಸೋದರಿಯರು ಸಿಕ್ಕಿಹಾಕಿಕೊಂಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊರಿಯನ್ ಆನ್ ಲೈನ್ ಗೇಮ್ಸ್ ಆದ ‘ಲವ್ ಗೇಮ್’ಗೆ ವ್ಯಸನಿಯಾಗಿದ್ದರು ಪೋಷಕರು ಅವರ ಅತಿಯಾದ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಶಾಲಿಮಾರ್ ಗಾರ್ಡನ್) ಅತುಲ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸೋದರಿಯರು ಮೊಬೈಲ್ ವ್ಯಸನಿಗಳಾಗಿದ್ದರು

ಪೊಲೀಸರ ಪ್ರಕಾರ, COVID-19 ಅವಧಿಯಲ್ಲಿ ಸಹೋದರಿಯರು ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದರು, ನಂತರ ನಿರಂತರವಾಗಿ ಕೊರಿಯನ್ ಗೇಮ್ಸ್ ನ್ನು ಆಟವಾಡುತ್ತಿದ್ದರು. “ಮೂವರೂ ಸ್ನಾನ ಮಾಡುವುದು, ತಿನ್ನುವುದು ಮತ್ತು ಮಲಗುವುದರಿಂದ ಹಿಡಿದು ಶಾಲೆಗೆ ಹೋಗುವವರೆಗೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು, ಆದರೆ ಇತ್ತೀಚೆಗೆ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ, ಓದುವುದರಲ್ಲಿ ಕೂಡ ಆಸಕ್ತಿ ಕಳೆದುಕೊಂಡಿದ್ದರಂತೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon