ಮಸಾಲೆ ದೋಸೆ ಸೇವಿಸಿ ಅಸ್ವಸ್ಥಗೊಂಡ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ತ್ರಿಶೂರ್ ನ ವೆಂಡರ್ ನಲ್ಲಿ ನಡೆದಿದೆ.ಮೃತಪಟ್ಟ ಬಾಲಕಿ ಹೆನ್ರಿ ಅವರ ಪುತ್ರಿ ಒಲಿವಿಯಾ ಎಂದು ಗುರುತಿಸಲಾಗಿದೆ.
ಒಲಿವಿಯ ತಂದೆ ಹೆನ್ರಿ ವಿದೇಶದಲ್ಲಿದ್ದರು. ಶನಿವಾರ ವಿದೇಶದಿಂದ ನೆಡುಂಬಸ್ಸೆರಿ ತಲುಪಿದ್ದ ಹೆನ್ರಿಯನ್ನು ಕರೆದೊಯ್ಯಲು ಒಲಿವಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ, ಹೆನ್ರಿ, ಅವರ ಪತ್ನಿ, ತಾಯಿ ಮತ್ತು ಒಲಿವಿಯಾ ಅಂಗಮಾಲಿಯ ಹೋಟೆಲ್ನಲ್ಲಿ ಊಟ ಮಾಡಿದರು. ಮಸಾಲೆ ದೋಸೆ ತಿಂದ ಮೂರು ವರ್ಷದ ಬಾಲಕಿ ಅಸ್ವಸ್ಥರಾದರು. ಕೂಡಲೇ ಒಲಿವಿಯಾ ಅವರನ್ನು ಒಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಬೆಳಿಗ್ಗೆ ಮಗುವಿನ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತು. ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಪ್ರಯಾಣದ ಸಮಯದಲ್ಲಿ ಸೇವಿಸಿದ ಮಸಾಲೆ ದೋಸೆಯಿಂದ ಆಹಾರ ವಿಷವಾಗಿದೆಎಂದು ಶಂಕಿಸಲಾಗಿದೆ. ಬಾಲಕಿ ಅಲ್ಲದೇ ಮಸಾಲೆ ದೋಸೆ ತಿಂದ ಬಾಲಕಿ ಹೆನ್ರಿ ತಾಯಿ ಹಾಗೂ ಪತ್ನಿ ಕೂಡ ಅಸ್ವಸ್ಥಗೊಂಡಿದ್ದಾರೆ. ಈ ಸಂಬಂಧ ಪುತ್ತುಕ್ಕಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.