ನವದೆಹಲಿ : ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಟೈಗರ್ಸ್ ಔಟ್ಸೈಡ್ ಟೈಗರ್ ರಿಸರ್ವ್ಸ್’ ಎಂಬ ಯೋಜನೆಯನ್ನು ಜಾರಿಗೆ ತರಲು ಕೇಂದ್ರವು ಸಜ್ಜಾಗಿದೆ. ಹುಲಿಗಳ ಬೇಟೆಯನ್ನು ತಡೆಯುವ ಮತ್ತು ಹುಲಿ ಮೀಸಲು ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಹುಲಿಗಳ ಸಂರಕ್ಷಣೆ ಕುರಿತು ಯೋಜನೆಯನ್ನು ರೂಪಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಇತ್ತೀಚೆಗೆ ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ ಎಂದು ತಿಳಿದುಬಂದಿದೆ.
ಮಾನವ-ಪ್ರಾಣಿ ಸಂಘರ್ಷದ ನಿದರ್ಶನಗಳನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. 2020 ಮತ್ತು 2024 ರ ನಡುವೆ, ಹುಲಿ ದಾಳಿಗೆ 378 ಮನುಷ್ಯರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಹುಲಿಗಳು ಹೇರಳವಾಗಿರುವ ಪ್ರದೇಶಗಳಾದ ನೇಪಾಳ, ಭೂತಾನ್ ಮತ್ತು ಸಿಕ್ಕಿಂನಾದ್ಯಂತ ಹುಲಿಗಳನ್ನು ಬೇಟೆಯಾಡುವುದು ಮತ್ತು ಹುಲಿ ಅಂಗಾಂಗಗಳ ಅಕ್ರಮ ಸಾಗಣೆ ಸಾಮಾನ್ಯವಾಗಿದೆ. ಆದ್ದರಿಂದ ನಾವು ಹುಲಿಗಳ ರಕ್ಷಣೆ ಕುರಿತು ನೇಪಾಳ ಮತ್ತು ಭೂತಾನ್ ಜೊತೆ ಸಂವಾದ ನಡೆಸುತ್ತಿದ್ದೇವೆ ಆದರೆ ನಾವು ಅದನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.