ಬೆಂಗಳೂರು : ಹೈಲ್ಮೆಟ್ ಧರಿಸದಿದ್ರೆ, ಸೀಟ್ ಬೆಲ್ಟ್ ಧರಿಸದಿದ್ರೆ ಹಾಗೇ ಟ್ರಾಫಿಕ್ ರೂಲ್ಸ್‌ಗಳನ್ನು ಬ್ರೇಕ್ ಮಾಡಿದ್ರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದು ಸಾಮಾನ್ಯ. ಹೀಗೆ ಬೈಕ್‌ನಲ್ಲಿ ಕುಳಿತಿರುವ ಹಿಂಬದಿ ಸವಾರ ದಂಡ ತಪ್ಪಿಸಲು ಹೆಲ್ಮೆಟ್ ಬದಲಿಗೆ ಬಾಣಲೆ ಹಿಡಿದು ಸವಾರಿ ಮಾಡಿರುವುದು ಕಂಡುಬಂದಿದೆ.
ನವೆಂಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ರೂಪೇನ ಅಗ್ರಹಾರ ಬಳಿ ನಡೆದಿದೆ. ಟ್ರಾಫಿಕ್ ನಡುವೆ ಚಲಿಸುವಾಗ ಬೈಕ್‌ನ ಹಿಂಬದಿ ಸವಾರನು ತನ್ನ ತಲೆಯ ಮೇಲೆ ಬಾಣಲೆಯನ್ನು ಹಿಡಿದುಕೊಂಡು ಕುಳಿತಿರುವುದನ್ನು ಕಾಣಬಹುದಾಗಿದೆ. ಈ ದೃಶ್ಯವನ್ನು ಬೇರೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ.

































