ಚಿತ್ರದುರ್ಗ: ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖೆಯ ಉದ್ದೇಶಿತ ಗೊಡಬನಹಾಳ್ ವಿ.ವಿ.ಕೇಂದ್ರಕ್ಕೆ ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದಿಂದ ಗೋಪುರ ಸಂಖ್ಯೆ 1 ಮತ್ತು 84,85 ರ ಗೋಪುರ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಸೆಪ್ಟೆಂಬರ್ 24 ಮತ್ತು 25ರಂದು ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎನ್.ಜೆ.ವೈ ಮತ್ತು ಐಪಿ ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/1 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ ಮಾರ್ಗದಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ. ಅನ್ನೆಹಾಳ್, ಹುಲ್ಲೂರು ಎನ್ಜೆವೈ, ಪಂಡರಹಳ್ಳಿ ಕಾವಲಹಟ್ಟಿ, ಜಾನುಕೊಂಡ, ಸಿದ್ದಾಪುರ, ಮಹದೇವನಕಟ್ಟೆ, ಗೊಡಬನಹಾಳ್, ಸೊಂಡೆಕೊಳ, ಸೊಲ್ಲಾಪುರ, ಕುರುಬರಹಳ್ಳಿ, ಬೆಟ್ಟದನಾಗೇನಳ್ಳಿ, ಸಿಂಗಾಪುರ ಮತ್ತು ಕಕ್ಕೇರು ಎನ್.ಜೆ.ವೈ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು: ಪಂಡರಹಳ್ಳಿ ವ್ಯಾಪ್ತಿಯ ಅನ್ನೆಹಾಳ್, ಹುಲ್ಲೂರು, ಪಂಡರಹಳ್ಳಿ ಕಾವಲಹಟ್ಟಿ, ಮಾಳಪ್ಪನಹಟ್ಟಿ, ಸಿದ್ದಾಪುರ, ಮಹದೇವನಕಟ್ಟೆ, ಗೊಡಬನಹಾಳ್, ಸೊಂಡೆಕೊಳ, ಕುರುಬರಹಳ್ಳಿ, ಬೆಟ್ಟದ ನಾಗೇನಹಳ್ಳಿ, ಸಿಂಗಾಪುರ ಹಾಗೂ ಕಕ್ಕೇರು ಗ್ರಾಮಗಳು ಮತ್ತು ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.