ಚಿತ್ರದುರ್ಗ: ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಸಾರ ಭಾರತಿ ಆಕಾಶವಾಣಿ ಸಹಯೋಗದಲ್ಲಿ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಇದೇ ಫೆ.05ರಂದು ಬೆಳಿಗ್ಗೆ 10ಕ್ಕೆ ಆಂಗ್ಲಭಾಷೆಗೆ ಸಂಬಂಧಿಸಿದಂತೆ ನೇರ ಫೋನ್ ಇನ್ ಸರಣಿಯು ಪ್ರಸಾರವಾಗಲಿದೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯ ವಿಷಯ ಪರಿವೀಕ್ಷಕ ಎಚ್.ಟಿ.ಚಂದ್ರಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಟಿ.ಸಂತೋಷ್, ಜಿ.ಆರ್.ಹಳ್ಳಿ ಸಹ ಶಿಕ್ಷಕ ಹೆಚ್.ಕೆ.ಮಹೇಶ್ ಭಾಗವಹಿಸುವರು.
ಮಕ್ಕಳು ಹಾಗೂ ಪೋಷಕರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲು 9448640273 ಹಾಗೂ 9141970272 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ