ಚಿತ್ರದುರ್ಗ : ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ನಿರ್ವಹಣೆಯಲ್ಲಿರುವ ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 1 ಬುಧವಾರ ಆಯುಧ ಪೂಜಾ ದಿನದಂದು ಕಲ್ಯಾಣೋತ್ಸವ ಹಾಗೂ ಅಕ್ಟೋಬರ್ 2 ಗುರುವಾರ ವಿಜಯದಶಮಿ ದಿನದಂದು ಬ್ರಹ್ಮರಥೋತ್ಸವ ನಡೆಯಲಿದೆ.
ಅಕ್ಟೋಬರ್ 22 ರಿಂದಲೇ ದೇವಸ್ಥಾನದಲ್ಲಿ ಪ್ರತಿದಿನ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಅಕ್ಟೋಬರ್ 1 ರಂದು ಬೆಳಿಗ್ಗೆ 11 ರಿಂದ 1 ಗಂಟೆಯ ವರೆಗೆ ಸಲ್ಲುವ ಶುಭ ಲಗ್ನದಲ್ಲಿ ಶ್ರೀ ಪದ್ಮಾವತಿ ಹಾಗೂ ಶ್ರೀ ಲಕ್ಷಿö್ಮÃ ಸಮೇತ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವರ ಕಲ್ಯಾಣೋತ್ಸವ ಜರುಗಲಿದೆ. ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ಸಂರ್ತಪಣೆ ನಡೆಯಲಿದೆ.
ಅಕ್ಟೋಬರ್ 2 ರಂದು ರಥಾಂಗ ಹೋಮ, ಬಲಿ ಹರಣ ನಂತರ ಬೆಳಿಗ್ಗೆ 11ಕ್ಕೆ ಪ್ರಕಾರೋತ್ಸವ ಹಾಗೂ ಮಧ್ಯಾಹ್ನ 12 ರಿಂದ 1:30ಕ್ಕೆ ಸಲ್ಲುವ ಶುಭ ಅಭಿಜಿನ್ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ. ಸಂಜೆ 5 ರಿಂದ 6:30 ವರೆಗೆ ಅಶ್ವವಾಹನೋತ್ಸವ ಮತ್ತು ಶಮಿ ಪೂಜೆಯನ್ನು ತಹಶೀಲ್ದಾರ್ ಹಾಗೂ ತಾಲ್ಲೂಕು ಮುಜುರಾಯಿ ಅಧಿಕಾರಿಗಳು ಸಲ್ಲಿಸಲಿದ್ದಾರೆ.
ಅಕ್ಟೋಬರ್ 3 ರಂದು ಬೆಳಿಗೆಗೆ 8 ರಿಂದ 10 ಗಂಟೆಗೆ ಶ್ರೀ ಸ್ವಾಮಿಯವರ ಊಂಜಲ್ ಸೇವೆ(ತೊಟ್ಟಿಲ ಸೇವೆ) ಮಧ್ಯಾಹ್ನ ಅವಭೃತ ಸೇವೆ, ಸಂಜೆ ಧ್ವಜಾ ಅವರೋಹಣ ರಾತ್ರಿ 8 ಗಂಟೆಗೆ ಶಯನೋತ್ಸವ ಕಾರ್ಯಕ್ರಮಗಳು ನಡೆಯಲಿವೆ
ಭಕ್ತಾಧಿಗಳು ಪಾಲ್ಗೊಂಡು ಭಗವಂತನ ಕೃಪೆ ಪಾತ್ರರಾಗುವಂತೆ ತಹಶೀಲ್ದಾರ್ ಗೋವಿಂದರಾಜ್.ಬಿ.ಎA. ಕೋರಿದ್ದಾರೆ.